ಬೆಳಗಾವಿ: ನೇಕಾರ ಕಾರ್ಮಿಕರಿಗೆ ಸರ್ಕಾರ ಘೋಷಿಸಿರುವ 2 ಸಾವಿರ ರೂ.ಗಳ ಬದಲಾಗಿ 10 ಸಾವಿರ ಪರಿಹಾರ ಘೋಷಣೆ ಮಾಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ನೇಕಾರ ಕಾರ್ಮಿಕ ಬಳಗದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ವಿಶೇಷ ಪ್ಯಾಕೇಜ್ ಧನಸಹಾಯ ಹೆಚ್ಚಿಸಲು ಆಗ್ರಹಿಸಿ ನೇಕಾರ ಕಾರ್ಮಿಕ ಬಳಗದಿಂದ ಪ್ರತಿಭಟನೆ
ಕೊರೊನಾ ಲಾಕ್ಡೌನ್ ಹಿನ್ನೆಲೆ ಘೋಷಿಸಿದ್ದ ವಿಶೇಷ ಪ್ಯಾಕೇಜ್ನ ಧನಸಹಾಯ ಹೆಚ್ಚಿಸುವಂತೆ ನೇಕಾರ ಕಾರ್ಮಿಕರ ಬಳಗದಿಂದ ಪ್ರತಿಭಟನೆ ನಡೆಸಲಾಯಿತು. ನೇಕಾರ ಕಾರ್ಮಿಕರಿಗೆ ಈಗಾಗಲೇ ಘೋಷಿಸಿರುವ 2 ಸಾವಿರ ರೂಪಾಯಿ ಬದಲಾಗಿ 10 ಸಾವಿರ ನೀಡುವಂತೆ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡ ನೌಕರರು, ದೇಶದ ಮಾನ ಮುಚ್ಚುವ ನೇಕಾರರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಕಳೆದ 4 ವರ್ಷಗಳಿಂದ ಸತತ ಬರಗಾಲ ಹಿನ್ನೆಲೆ ಮಾರುಕಟ್ಟೆ ಕುಸಿತವಾಗಿದ್ದರಿಂದ ನೇಕಾರರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ನೇಕಾರ ಕಾರ್ಮಿಕ ಬಳಗದ ಮುಖಂಡ ಸೋಮಶೇಖರ್ ಕೌಡಿ ಹೇಳಿದರು.
ಹೀಗಾಗಿ ಸರ್ಕಾರ ಈಗಾಗಲೇ ಘೋಷಣೆ ಮಾಡಿದ 2 ಸಾವಿರ ರೂ.ಗಳ ಬದಲಾಗಿ 10 ಸಾವಿರ ರೂ. ನೀಡಬೇಕು. ಜೊತೆಗೆ ಸಮಗ್ರ ದಿನಸಿ ಕಿಟ್ಗಳು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.