ಬೆಳಗಾವಿ: ಕುಂದಾನಗರಿಗೆ ಅಮಿತ್ ಶಾ ಆಗಮನ ಹಿನ್ನೆಲೆ ಕೃಷಿ ಕಾಯ್ದೆ ವಿರೋಧಿಸಿ ನಗರದ ಚೆನ್ನಮ್ಮ ವೃತ್ತದಲ್ಲಿ ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಪ್ರತಿಭಟನೆ ಕಳೆದ ಹಲವು ದಿನಗಳಿಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಕೆಲ ಅನ್ನದಾತರು ಸಾವನ್ನಪ್ಪಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಹಿಂಪಡೆಯುತ್ತಿಲ್ಲ. ರೈತರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕಾಳಜಿ ಇಲ್ಲವೆನ್ನುವಂತೆ ತೋರುತ್ತಿದೆಯೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ:ಸಿಎಂ ನಿರ್ಗಮನದ ನಂತರ ಆಯ್ದ ನಾಯಕರ ಜೊತೆ ಅಮಿತ್ ಶಾ ಪ್ರತ್ಯೇಕ ಸಭೆ: ಸಿ.ಡಿ ಬಗ್ಗೆ ನಡಿತಾ ಚರ್ಚೆ!?
ಇಂದು ಬೆಳಗಾವಿಗೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೃಷಿ ಕಾಯ್ದೆ ಹಿಂಪಡೆಯುವ ನಿರ್ಧಾರದೊಂದಿಗೆ ಬರಬೇಕು. ರೈತ ವಿರೋಧಿ ಕಾನೂನು ತಂದಿರುವ ಬಿಜೆಪಿ ಸರ್ಕಾರ ರೈತರ ಘೋರಿ ಮೇಲೆ ಜನಸೇವಕ ಸಮಾವೇಶ ನಡೆಸುತ್ತಿದೆ. ರೈತರು ಸಾವನ್ನಪ್ಪಿದ್ದರೂ ಯಾವೊಬ್ಬ ನಾಯಕರು ಕೂಡ ನೋವಿಗೆ ಸ್ಪಂದಿಸಿಲ್ಲ. ಕೃಷಿ ಕಾಯ್ದೆ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಅಮಿತ್ ಶಾ ಹಟಾವೋ ದೇಶ ಬಚಾವೋ ಆಂದೋಲನ ಆರಂಭಿಸಲಾಗಿದೆ ಎಂದು ಕಿಡಿಕಾರಿದರು.