ಬಿಮ್ಸ್ ಆಸ್ಪತ್ರೆಯಲ್ಲಿ ಓಪಿಡಿ ವಿಭಾಗ ಆರಂಭಿಸುವಂತೆ ಒತ್ತಾಯ... ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ - belgavi latest protest news
ಬಿಮ್ಸ್ ಆಸ್ಪತ್ರೆಯಲ್ಲಿ ಓಪಿಡಿ ವಿಭಾಗವನ್ನು ತಕ್ಷಣವೇ ಆರಂಭಿಸುವುದರ ಜತೆಗೆ ಕೋವಿಡ್ ಮತ್ತು ಓಪಿಡಿ ವಿಭಾಗವನ್ನು ಪ್ರತ್ಯೇಕಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಬೆಳಗಾವಿಯಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕ ಪ್ರತಿಭಟನೆ ಮಾಡಿದೆ.
![ಬಿಮ್ಸ್ ಆಸ್ಪತ್ರೆಯಲ್ಲಿ ಓಪಿಡಿ ವಿಭಾಗ ಆರಂಭಿಸುವಂತೆ ಒತ್ತಾಯ... ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ protest for OPD in BIMS hospital in belgavi](https://etvbharatimages.akamaized.net/etvbharat/prod-images/768-512-8822064-911-8822064-1600250710670.jpg)
ಪ್ರತಿಭಟನೆ
ಬೆಳಗಾವಿ: ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಜೊತೆಗೆ ಹೊರ ರೋಗಿಗಳ ವಿಭಾಗ ಮತ್ತು ಕೋವಿಡ್ ವಾರ್ಡ್ ಅನ್ನು ಪ್ರತ್ಯೇಕಿಸುವಂತೆ ಒತ್ತಾಯಿಸಿ ನಗರದ ಡಿಸಿ ಕಚೇರಿ ಎದುರು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ