ಅಥಣಿ(ಬೆಳಗಾವಿ): ರಾಜ್ಯ ಸರ್ಕಾರ ಕೃಷ್ಣಾ ನದಿಯ ಪ್ರವಾಹ ಪೀಡಿತರಿಗೆ ಪರಿಹಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಅಥಣಿ ತಾಲೂಕಿನ ಜನವಾಡ ಗ್ರಾಮಸ್ಥರು ರಸ್ತೆ ತಡೆದು, ಪ್ರತಿಭಟನೆ ನಡೆಸಿದರು.
ನೆರೆ ಪೀಡಿತ ಪ್ರದೇಶದ ಸರ್ವೆಯಲ್ಲಿ ತಾರತಮ್ಯ ಆರೋಪ: ರಸ್ತೆ ತಡೆದು ಸಂತ್ರಸ್ತರ ಪ್ರತಿಭಟನೆ - Protest of Janavada villagers in Athani taluk
ಸರ್ವೆ ಕಾರ್ಯದಲ್ಲಿ ತಾರತಮ್ಯ ತೋರಲಾಗುತ್ತಿದೆ. ಎ,ಬಿ,ಸಿ ಕೆಟಗರಿಯಾಗಿ ವಿಂಗಡಿಸಿ, ಹಾನಿಯಾದ ಮನೆಗಳನ್ನು ಗುರುತಿಸುವಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲೆಯ ನೆರೆ ಸಂತ್ರಸ್ತರು ಆರೋಪಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ಸಂಪರ್ಕ ರಸ್ತೆ ತಡೆದ ಪ್ರತಿಭಟನಾಕಾರರು, ಸರ್ವೆ ಕಾರ್ಯದಲ್ಲಿ ತಾರತಮ್ಯ ತೋರಲಾಗುತ್ತಿದೆ. ಎ,ಬಿ,ಸಿ ಕೆಟಗರಿಯಾಗಿ ವಿಂಗಡಿಸಿ, ಹಾನಿಯಾದ ಮನೆಗಳನ್ನು ಗುರುತಿಸುವಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು. ಇನ್ನು ಸಮರ್ಪಕವಾಗಿ ಸರ್ವೆ ನಡೆಸಬೇಕು ಮತ್ತು ನಿಜವಾದ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ರಸ್ತೆ ತಡೆಯಿಂದಾಗಿ ಸತ್ತಿ ಗ್ರಾಮದ ಹೊರವಲಯದಲ್ಲಿ ವಾಹನ ಸವಾರರು ಕಿಲೋ ಮೀಟರ್ಗಟ್ಟಲೇ ರಸ್ತೆಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಅಥಣಿ ತಹಶಿಲ್ದಾರ್ ಎಂ. ಎನ್. ಬಳಿಗಾರ ಹಾಗೂ ಅಥಣಿ ಪೊಲೀಸರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು.