ಕರ್ನಾಟಕ

karnataka

ETV Bharat / state

ಕೊಲೆ ಆರೋಪಿ ಸಂಬಂಧಿಯಿಂದ ಪ್ರತಿಭಟನೆ... ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಹೈಡ್ರಾಮಾ - ವಾಗ್ವಾದಕ್ಕಿಳಿದು ವಿಷ ಕುಡಿದಂತೆ ಹೈಡ್ರಾಮ

ಬೈಲಹೊಂಗಲ ತಾಲೂಕಿನ ಕುರಗುಂದ ಗ್ರಾಮದ ಸಂಜು ಕೊಡ್ಲಿ ಎಂಬಾತ ಆತ್ಮಹತ್ಯೆಗೆ ಯತ್ನಿಸಿದವನು. ವಿಷ ಸೇವಿಸಿದ್ದೇನೆಂದು ಹೇಳಿ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ ಯುವಕನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ‘

relative of the accused
ಹೈಡ್ರಾಮ

By

Published : Jun 25, 2020, 5:16 PM IST

ಬೆಳಗಾವಿ: ಕೊಲೆ ಆರೋಪಿಯ ಸಂಬಂಧಿಯೋರ್ವ ವಿಷ ಸೇವಿಸಿರುವುದಾಗಿ ಹೈಡ್ರಾಮಾ ಮಾಡಿದ ಘಟನೆ, ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.

ಬೈಲಹೊಂಗಲ ತಾಲೂಕಿನ ಕುರಗುಂದ ಗ್ರಾಮದ ಸಂಜು ಕೊಡ್ಲಿ ಎಂಬಾತ ಆತ್ಮಹತ್ಯೆಗೆ ಯತ್ನಿಸಿದವನು. ಈತ ಪೊಲೀಸರ ಜೊತೆಗೆ ರಸ್ತೆಯಲ್ಲೇ ವಾಗ್ವಾದ ನಡೆಸಿದ. ಬಳಿಕ ಯುವಕನನ್ನು ಪೊಲೀಸರು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೈಲಹೊಂಗಲ: ಪತ್ನಿ ಜೊತೆ ಅನೈತಿಕ ಸಂಬಂಧ... ಪತಿಯಿಂದ ಯುವಕನ ಬರ್ಬರ ಹತ್ಯೆ

ಬೈಲಹೊಂಗಲ ತಾಲೂಕಿನ ಕುರಗುಂದ ಗ್ರಾಮದಲ್ಲಿ ಅನೈತಿಕ ಸಂಬಂಧ ಹಿನ್ನೆಲೆ ಬುಧವಾರ ನಾಗಪ್ಪ ವನ್ನೂರ (22) ಎಂಬಾತನ ಹತ್ಯೆಯಾಗಿತ್ತು. ಈ ಪ್ರಕರಣ ಸಂಬಂಧ ಬೈಲಹೊಂಗಲ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಪೊಲೀಸರ ಕ್ರಮ ಪ್ರಶ್ನಿಸಿ ಸಂಜು ಕೊಡ್ಲಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ. ಈ ವೇಳೆ ವಿಷ ಸೇವಿಸಿರುವುದಾಗಿ ಸಂಜು ಹೈಡ್ರಾಮಾ ಮಾಡಿದ್ದಾನೆ.

ABOUT THE AUTHOR

...view details