ಬೆಳಗಾವಿ :ಹಿಂದೂ ದೇವತೆಗಳನ್ನು ಅವಮಾನಿಸಿದ ತಾಂಡವ ಚಲನಚಿತ್ರ ನಿಷೇಧಿಸುವಂತೆ ಆಗ್ರಹಿಸಿ ಹಮಾರೇ ದೇಶ ಸಂಘಟನೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಹಿಂದೂ ದೇವತೆಗಳನ್ನ ಅವಮಾನಿಸಿದ ತಾಂಡವ ಚಲನಚಿತ್ರ ನಿಷೇಧಿಸುವಂತೆ ಆಗ್ರಹ - ಬೆಳಗಾವಿ
ಭಾರತದಲ್ಲಿ ಹಿಂದೂ ದೇವತೆಗಳನ್ನು ಅಮಾನಿಸುವ ಚಲನಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವುದು ದುರದೃಷ್ಟಕರ. ಈಚೆಗೆ ನಿರ್ಮಾಣ ಮಾಡಲಾದ ತಾಂಡವ ಹಿಂದಿ ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ.
![ಹಿಂದೂ ದೇವತೆಗಳನ್ನ ಅವಮಾನಿಸಿದ ತಾಂಡವ ಚಲನಚಿತ್ರ ನಿಷೇಧಿಸುವಂತೆ ಆಗ್ರಹ protest against Tandav film](https://etvbharatimages.akamaized.net/etvbharat/prod-images/768-512-10398367-527-10398367-1611741186537.jpg)
ಭಾರತದಲ್ಲಿ ಹಿಂದೂ ದೇವತೆಗಳನ್ನು ಅಮಾನಿಸುವ ಚಲನಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವುದು ದುರದೃಷ್ಟಕರ. ಈಚೆಗೆ ನಿರ್ಮಾಣ ಮಾಡಲಾದ ತಾಂಡವ ಹಿಂದಿ ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ. ದೇಶದಾದ್ಯಂತ ವಿರೋಧ ವ್ಯಕ್ತವಾದ ಕೂಡಲೇ ಚಿತ್ರದಲ್ಲಿನ ತುಣುಕು ಕತ್ತರಿಸಲಾಗಿದೆ. ದೇಶದ ಕೋಟ್ಯಾಂತರ ಹಿಂದೂಳಿಗಳಿಗೆ ಅವಮಾನಿಸಲಾಗುತ್ತಿದೆ. ತುಣುಕು ಮಾತ್ರ ಕತ್ತರಿಸದೇ ಇಡೀ ಚಿತ್ರವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಈ ರೀತಿಯ ಚಿತ್ರಗಳಿಂದ ದೇಶದ ಹಿಂದೂ ಯುವ ಪೀಳಿಗೆಯ ಜನಾಂಗ ದಾರಿ ತಪ್ಪುತ್ತದೆ. ದೇಶದಲ್ಲಿನ ಹಿಂದೂ ಸಂಸ್ಕ್ರತಿಗೆ ಪೆಟ್ಟು ಬಿಳುತ್ತದೆ. ಹಾಗಾಗಿ ಈ ರೀತಿಯ ಹಿಂದೂ ದೇವತೆಗಳು ಹಾಗೂ ಹಿಂದೂಗಳನ್ನು ಅವಮಾನಿಸುವ ಚಿತ್ರಗಳು, ಶೋಗಳು, ಧಾರವಾಹಿ ಸೇರಿದಂತೆ ಯಾವುದೇ ಮಾಧ್ಯಮವಾದರೂ ಕಠಿಣ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಸೂಕ್ತ ಕಾನೂನು ರಚಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.