ಕರ್ನಾಟಕ

karnataka

ETV Bharat / state

ಬದುಕಿಸಿ ಇಲ್ಲವೇ ಮುಳುಗಿಸಿ : ಸರ್ಕಾರದ ವಿರುದ್ಧ ಸಂಸ್ರಸ್ತರ ಆಕ್ರೋಶ- ಪಾದಯಾತ್ರೆ - ಬದುಕಿಸಿ ಇಲ್ಲವೇ ಮುಳುಗಿಸಿ

ನೆರೆ ಪರಿಹಾರದಲ್ಲಿ ತಾಲೂಕು ಆಡಳಿತ ವೈಫಲ್ಯ ಹಾಗೂ ಕೃಷ್ಣ ನದಿ ಪ್ರವಾಹ ಸಂತ್ರಸ್ತರಿಗೆ ಪರಿಹಾರದಲ್ಲಿ ತಾರತಮ್ಯ ವಿಳಂಬ ಧೋರಣೆ ಖಂಡಿಸಿ ದರೂರ ಸೇತುವೆಯಿಂದ ಅಥಣಿ ತಹಸಿಲ್ದಾರ್ ಕಚೇರಿವರಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಪಾದಯಾತ್ರೆ

By

Published : Oct 18, 2019, 11:34 PM IST

ಅಥಣಿ: ಬದುಕಿಸಿ ಇಲ್ಲವೇ ಮುಳುಗಿಸಿ ಸಂಕಲ್ಪದೆಡೆಗೆ ಸಂತ್ರಸ್ತರ ನಡಿಗೆ ಎಂಬ ಶೀರ್ಷಿಕೆ ಹೊತ್ತು ನೆರೆ ಸಂತ್ರಸ್ತರು ದರೂರ ಸೇತುವೆಯಿಂದ ಅಥಣಿ ತಹಸಿಲ್ದಾರ್ ಕಚೇರಿವರಗೆ ಬೃಹತ್ ಪಾದಯಾತ್ರೆ ಕೈಗೊಂಡಿದ್ದಾರೆ.

ಅಥಣಿ ತಾಲೂಕಿನ 24 ಹಳ್ಳಿಗಳ ನೆರೆ ಸಂತ್ರಸ್ತರ ಬೃಹತ್ ಕಾಲ್ನಡಿಗೆಯ ಮುಖಾಂತರ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿರುವ ನೆರೆ ಸಂತ್ರಸ್ತರು. ದರೂರ ಗ್ರಾಮದಿಂದ ತಹಶಿಲ್​​​ ಕಚೇರಿವರಗೆ ಸುಮಾರು 15ಕಿಲೋಮೀಟರ್ ಪಾದಯಾತ್ರೆ ಮಾಡಿದರು.

ನೆರೆ ಸಂತ್ರಸ್ತರ ಪರಿಹಾರದಲ್ಲಿ ತಾರತಮ್ಯ ವಿರೋಧಿಸಿ ನಿರಾಶ್ರಿತರ ಪಾದಯಾತ್ರೆ

ರಾಜ್ಯ ಸರ್ಕಾರ ಮತ್ತು ತಾಲೂಕು ಆಡಳಿತ ಕೃಷ್ಣಾ ನದಿ ಪ್ರವಾಹ ಗ್ರಾಮಗಳಿಗೆ ಸರಿಯಾದ ಪರಿಹಾರ ಮತ್ತು ರೈತರ ಬೆಳೆ, ಮನೆ ಪರಿಹಾರ ಹಣ ನೀಡುವಲ್ಲಿ ವಿಫಲರಾಗಿದ್ದಾರೆ. ಇದನ್ನು ಖಂಡಿಸಿ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details