ಬೆಳಗಾವಿ: ಚೀನಾದ ವಸ್ತುಗಳನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿ ಎಸ್ಸಿ ಸಂಘಟನೆಗಳ ನೇತೃತ್ವದಲ್ಲಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಚೀನಾದ ವಸ್ತುಗಳನ್ನು ಬ್ಯಾನ್ ಮಾಡಲು ಆಗ್ರಹಿಸಿ ಪ್ರತಿಭಟನೆ - Protest of Dalit organizations
ಭಾರತೀಯರು ಚೀನಾ ವಸ್ತುಗಳ ಬಳಕೆಯಿಂದ ದೂರವಿರುವಂತೆ ಆಗ್ರಹಿಸಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಎಸ್ಸಿ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
![ಚೀನಾದ ವಸ್ತುಗಳನ್ನು ಬ್ಯಾನ್ ಮಾಡಲು ಆಗ್ರಹಿಸಿ ಪ್ರತಿಭಟನೆ protest](https://etvbharatimages.akamaized.net/etvbharat/prod-images/768-512-7667537-639-7667537-1592478534646.jpg)
ದಲಿತ ಸಂಘಟನೆ ಪ್ರತಿಭಟನೆ
ಕ್ಸಿ ಜಿನ್ ಪಿಂಗ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಚೀನಾ ವಿರುದ್ಧ ಘೋಷಣೆ ಕೂಗಿದರು. ಭಾರತೀಯರು ಚೀನಾ ವಸ್ತುಗಳ ಬಳಕೆಯಿಂದ ದೂರವಿರುವಂತೆ ಆಗ್ರಹಿಸಿದರು.
ಚೀನಾ ದೇಶದ ಎಲ್ಲಾ ವಸ್ತುಗಳನ್ನು ದೇಶದ ನಾಗರಿಕರು ಖರೀದಿಸಬಾರದು. ಇದಲ್ಲದೆ ಚೀನಾ ವಸ್ತುಗಳಿಗೆ ಬೆಂಕಿ ಹಚ್ಚುವ ಕಾರ್ಯಕ್ರಮ ಹಾಕಿಕೊಳ್ಳಬೇಕು. ಆ ದೇಶದ ವಸ್ತುಗಳನ್ನು ಬ್ಯಾನ್ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರಧಾನಿ ಮೋದಿ ಅವರು ಕರೆ ನೀಡಿದರೆ ದೇಶದ ಎಲ್ಲರೂ ಗಡಿ ರಕ್ಷಣೆಗೆ ನಿಲ್ಲುತ್ತೇವೆ ಎಂದರು.