ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಅವರ ಆಸ್ತಿ ವಿವರ :
2019ರ ಉಪ ಚುನಾವಣೆಯಲ್ಲಿ ಘೋಷಣೆ ಮಾಡಿದ ಚರಾಸ್ತಿ ಮೌಲ್ಯ- ಒಟ್ಟು 1.35 ಕೋಟಿ ರೂ.(76 ಲಕ್ಷ ಮೌಲ್ಯದ 2 ಕೆಜಿ ಚಿನ್ನ, ಎರಡು ಕಾರು, ಒಂದು ಬೈಕ್ ಹಾಗೂ ಸಕ್ಕರೆ ಕಾರ್ಖಾನೆ ಶೇರು ಸೇರಿ)
ಒಟ್ಟು ಸ್ಥಿರಾಸ್ತಿ ಮೌಲ್ಯ 6.30 ಕೋಟಿ ರೂ.-(ಕೃಷಿ ಜಮೀನು ಹಾಗೂ ನಿವೇಶನಗಳು, ಕಟ್ಟಡಗಳು ಸೇರಿದಂತೆ)
ರಾಜು ಕಾಗೆ ಅವರ ಪತ್ನಿ ಆಸ್ತಿ ವಿವರ :
ಒಟ್ಟು ಚರಾಸ್ತಿ ಮೌಲ್ಯ- 19.29 ಲಕ್ಷ ರೂ.
ಒಟ್ಟು ಸ್ಥಿರಾಸ್ತಿ ಮೌಲ್ಯ : 1.87 ಕೋಟಿ ರೂ.
ಇಬ್ಬರು ಅವಲಂಬಿತರ ಆಸ್ತಿ ವಿವರ :
ಮಕ್ಕಳಾದ ಕೃತಿಕಾ ಹಾಗೂ ತೃಪ್ತಿ ಆಸ್ತಿ ವಿವರ - ಒಟ್ಟು ಚರಾಸ್ತಿ ವಿವರ - 3.70 ಲಕ್ಷ ರೂ.
ಒಟ್ಟು ಸ್ಥಿರಾಸ್ತಿ ವಿವರ -3.85 ಕೋಟಿ ರೂ.
ಒಟ್ಟು ಕುಟುಂಬದ ಆಸ್ತಿ ಮೌಲ್ಯ-₹13.59 ಕೋಟಿ
ಸಾಲದ ವಿವರ : ಯಾವುದೇ ಸಾಲ ಇಲ್ಲ
ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಆಸ್ತಿ ವಿವರ :
2019ರ ಉಪಚುನಾವಣೆ ವೇಳೆ ಘೋಷಣೆಯಾದ ಆಸ್ತಿ
ಒಟ್ಟು ಚರಾಸ್ತಿ ಮೌಲ್ಯ- 22.11 ಕೋಟಿ ರೂ.
ಒಟ್ಟು ಸ್ಥಿರಾಸ್ತಿ ಮೌಲ್ಯ- 4.68 ಕೋಟಿ ರೂ.
ಪತ್ನಿ ಉಜ್ವಲ ಪಾಟೀಲ್ ಆಸ್ತಿ ವಿವರ :
ಒಟ್ಟು ಸ್ಥಿರಾಸ್ತಿ ಮೌಲ್ಯ- 97.60 ಲಕ್ಷ ರೂ.
ಒಟ್ಟು ಚರಾಸ್ತಿ ಮೌಲ್ಯ- 2.64 ಕೋಟಿ ರೂ.
ಒಟ್ಟು ಕುಟುಂಬದ ಆಸ್ತಿ ಮೌಲ್ಯ- 30.65 ಕೋಟಿ ರೂ.
ಸಾಲದ ವಿವರ :
ಪತ್ನಿ ಉಜ್ವಲ ಪಾಟೀಲ್‌ರಿಂದ 16.30 ಲಕ್ಷ ಸಾಲ ಸೇರಿದಂತೆ ಒಟ್ಟು ಸಾಲ-15.7 ಕೋಟಿ ರೂ.
ನಾಮಪತ್ರ ಪರಿಶೀಲನೆಗೆ ಬಂದ ಗೋಕಾಕ್ ಕ್ಷೇತ್ರ ಅಭ್ಯರ್ಥಿಗಳು:
ನಾಮಪತ್ರ ಪರಿಶೀಲನೆಗೆ ಬಂದ ಗೋಕಾಕ್ ಕ್ಷೇತ್ರದ ಅಭ್ಯರ್ಥಿಗಳು.. ಗೋಕಾಕ್ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಪರಿಶೀಲನೆ ನಡೆಸಲಾಯ್ತು. ನಾಮಪತ್ರ ಪರಿಶೀಲನೆಗೆ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ, ಜೆಡಿಎಸ್ ಕ್ಯಾಂಡಿಡೇಟ್ ಅಶೋಕ ಪೂಜಾರಿ ಆಗಮಿಸಿದರು. ಇನ್ನು, ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಮತ್ತು ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಅಕ್ಕಪಕ್ಕ ಕುಳಿತು ಮಾತುಕತೆ ನಡೆಸಿ ಕುಶಲೋಪರಿ ವಿಚಾರಿಸಿಕೊಂಡರು.