ಚಿಕ್ಕೋಡಿ:ಕರ್ನಾಟಕದಲ್ಲಿ ನಡೆಯುತ್ತಿರುವ ಉಪಚುನಾವಣೆ ಹಿನ್ನೆಲೆ ಕಾಗವಾಡ ಮತಕ್ಷೇತ್ರದಲ್ಲಿ ಇಂದು ಜೆಡಿಎಸ್ ರಣಕಹಳೆ ಮೊಳಗಿಸಲಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ನಡೆಯಲಿರುವ ಜೆಡಿಎಸ್ ಸಮಾವೇಶಕ್ಕೆ ವೇದಿಕೆ ಸಿದ್ದಗೊಳ್ಳುತ್ತಿದೆ.
ಕಾಗವಾಡದಲ್ಲಿ ರಣಕಹಳೆ ಮೊಳಗಿಸಲು ಹೆಚ್ಡಿಕೆ ಸನ್ನದ್ಧ.. - By election
ಉಪಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ, ಮೂರು ಪಕ್ಷಗಳು ಸಹ ತಮ್ಮ ಅಭ್ಯರ್ಥಿಗಳನ್ನು ಗೆಲುವು ಎಂಬ ಕುದುರೆ ಏರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ಇಂದು ಮಾಜಿ ಸಿಎಂ ಕುಮಾರಸ್ವಾಮಿ ಕಾಗವಾಡ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ.
ಹೆಚ್.ಡಿ.ಕೆ ಆಗಮನಕ್ಕೆ ಸಜ್ಜಾಗ್ತಿದೆ ವೇದಿಕೆ
ಕಾಗವಾಡ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ತೂಗಶೆಟ್ಟಿ ಪರ ಪ್ರಚಾರಕ್ಕೆ ಇಂದು ಹೆಚ್.ಡಿ.ಕುಮಾರಸ್ವಾಮಿ ಕಾಗವಾಡ ಕ್ಷೇತ್ರದಲ್ಲಿ ಮತಬೇಟೆ ನಡಸಲಿದ್ದು, ಮಲಾಬಾದ್, ಮಧಭಾವಿ, ಐನಾಪೂರ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ.