ಅಥಣಿ:ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಇಲ್ಲದೆ ಸರಿಸುಮಾರು ಎರಡು ತಿಂಗಳಿಂದ ಸ್ಥಗಿತಗೊಂಡಿದೆ. ಪರಿಣಾಮ ಜನಸಾಮಾನ್ಯರು ನೀರಿಲ್ಲದೆ ಪರದಾಡುವಂತಾಗಿದೆ.
ಅಥಣಿಯಲ್ಲಿ ಅವ್ಯವ್ಯಸ್ಥೆಯ ಆಗರವಾದ ಶುದ್ಧ ಕುಡಿಯುವ ನೀರಿನ ಘಟಕ - ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪುನರ್ವಸತಿ ಝುಂಜರವಾಡ ಗ್ರಾಮ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪುನರ್ವಸತಿ ಝುಂಜರವಾಡ ಗ್ರಾಮದಲ್ಲಿ ಎರಡು ತಿಂಗಳಿಂದ ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಸಾರ್ವಜನಿಕರು ಪರದಾಡುವಂತಾಗಿದೆ.
ಅಥಣಿಯಲ್ಲಿ ಅವ್ಯವ್ಯಸ್ಥೆಯ ಆಗರವಾದ ಶುದ್ಧ ಕುಡಿಯುವ ನೀರಿನ ಘಟಕ
ಈ ಕುಡಿಯುವ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕವಿದ್ದು, ಪಕ್ಕದಲ್ಲಿ ನೀರು ಸಹ ಇದೆ. ಆದರೂ ಸ್ಥಳೀಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಶುದ್ಧ ನೀರಿನಿಂದ ಜನ ವಂಚಿತವಾಗಿದ್ದಾರೆ. ನೀರಿನ ಘಟಕದಲ್ಲಿ ಕೆಲವು ಕಿಡಿಗೇಡಿಗಳು ಮಲ-ಮೂತ್ರ ವಿಸರ್ಜನೆ ಮಾಡಿ ವಿದ್ಯುತ್ ದೀಪಗಳನ್ನು ಕದಿಯುತ್ತಿದ್ದಾರೆ.
ಇನ್ನು ಬೇಸಿಗೆ ಸಮೀಪಿಸುತ್ತಿದ್ದು,ನೀರಿಗಾಗಿ ಹಾಹಾಕಾರ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಶುದ್ದ ಕುಡಿಯುವ ನೀರಿನ ಘಟಕಕ್ಕೆ ಕಾಯಕಲ್ಪ ಒದಗಿಸಬೇಕಿದೆ.