ಬೆಳಗಾವಿ : ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಮರಾಠಿ ಭಾಷೆಯಲ್ಲಿ ಕ್ರಿಕೆಟ್ ಪಂದ್ಯಾಟದ ಬ್ಯಾನರ್ ಅಳವಡಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕನ್ನಡ ಪರ ಕಾರ್ಯಕರ್ತೆ ಶಾಸಕ ಅನಿಲ್ ಬೆನಕೆ ಫೋಟೋಗೆ ಮಸಿ ಎರಚಿದ್ದಾರೆ.
ನಗರದ ಸಂಗೋಳ್ಳಿ ರಾಯಣ್ಣ ವೃತ್ತದ ಬಳಿ ಶಾಸಕರ ಅನಿಲ್ ಬೆನಕೆ ಫೋಟೋದೊಂದಿಗೆ ಮರಾಠಿ ಭಾಷೆಯಲ್ಲಿ ಕ್ರಿಕೆಟ್ ಪಂದ್ಯಾಟದ ಬ್ಯಾನರ್ ಒಂದನ್ನು ಅಳವಡಿಸಲಾಗಿತ್ತು. ಇದನ್ನು ನೋಡಿದ ಕನ್ನಡ ಪರ ಕಾರ್ಯಕರ್ತೆ ಕಸ್ತೂರಿಬಾಯಿ ಶಾಸಕ ಅನಿಲ ಬೆನಕೆ ಫೋಟೋಗೆ ಮಸಿ ಎರಚಿದ್ದಾರೆ.