ಚಿಕ್ಕೋಡಿ: ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲರು ತಮ್ಮ ಸ್ವಾರ್ಥಕ್ಕಾಗಿ ಮರಾಠಿಗರನ್ನು ಓಲೈಸುವುದಕ್ಕೋಸ್ಕರ ಕಾರ್ಯಕ್ರಮವೊಂದರಲ್ಲಿ ಮರಾಠಿಯಲ್ಲಿ ಭಾಷಣ ಮಾಡಿದ್ದಾರೆ. ಈ ಮೂಲಕ ನಾಡದ್ರೋಹವೆಸಗಿದ್ದಾರೆ ಎಂದು ಕಾಗವಾಡ ತಾಲೂಕಾ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶಿದ್ದು ವಡಿಯರ ಹಾಗೂ ಅಥಣಿ ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ (ಬೊಮ್ನಾಳ) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಕನ್ನಡಪರ ಸಂಘಟನೆ ವತಿಯಿಂದ ಶ್ರೀಮಂತ ಪಾಟೀಲ ವಿರುದ್ಧ ಪ್ರತಿಭಟನೆ - chikkodi news
ಇತ್ತೀಚೆಗೆ ಸಚಿವ ಶ್ರೀಮಂತ ಪಾಟೀಲ ಕಾರ್ಯಕ್ರಮವೊಂದರಲ್ಲಿ ಮರಾಠಿ ಭಾಷೆಯಲ್ಲಿ ಭಾಷಣ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.
shreematha patil
ಈ ವೇಳೆ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗುತ್ತ ಚನ್ನಮ್ಮ ವೃತ್‍ದಲ್ಲಿ ತಹಶೀಲ್ದಾರ ಪರಿಮಳಾ ದೇಶಪಾಂಡೆ, ಪಿಎಸ್‍ಐ ಹಣಮಂತ ಧರ್ಮಟ್ಟಿಯವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಬಸನಗೌಡ ಪಾಟೀಲ, ರಾಜ್ಯದ ನೆಲ, ಜಲ, ನಾಡು,ನುಡಿ ಉಪಯೋಗಿಸಿಕೊಂಡು ಕನ್ನಡಿಗರಿಂದ ಮತ ಪಡೆದು ಶಾಸಕ, ಸಚಿವರಾಗಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಪಾಟೀಲರು ಈಗ ಕನ್ನಡ ಭಾಷೆ ಮರೆತು ದ್ರೋಹ ಬಗೆದಿದ್ದಾರೆ. ಇವರಿಗೆ ರಾಜ್ಯದಲ್ಲಿ ಅಧಿಕಾರ ನಡೆಸಲು ಹಾಗೂ ಬದುಕಲು ಅರ್ಹತೆ ಇಲ್ಲ. ತಕ್ಷಣವೇ ಅವರನ್ನು ಶಾಸಕ ಹಾಗೂ ಸಚಿವ ಸ್ಥಾನದಿಂದ ಕೆಳಗಿಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.