ಬೆಳಗಾವಿ :ಕನ್ನಡರಾಜ್ಯೋತ್ಸವ ವಿರೋಧಿಸಿ ಎಂಇಎಸ್ ನಡೆಸುತ್ತಿದ್ದ ಪ್ರತಿಭಟನಾ ಸಭೆ ತಡೆಯಲು ಯತ್ನಿಸಿದ ಕನ್ನಡಾಭಿಮಾನಿಯನ್ನು ಪೊಲೀಸರು ವಶಕ್ಕೆ ಪಡೆದರು.
ನಾಡ ವಿರೋಧಿ ಎಂಇಎಸ್ ಸಭೆ ತಡೆಯಲೆತ್ನಿಸಿದ ಕನ್ನಡ ಹೋರಾಟಗಾರನ ಬಂಧನ
ಮರಾಠಾ ಮಂದಿರ ಮಂಗಲ ಕಾರ್ಯಾಲಯದ ಬಳಿಗೆ ಬರುತ್ತಿದ್ದಂತೆ ಕನ್ನಡ ಪರ ಹೋರಾಟಗಾರನ ಕೈಯಲ್ಲಿದ್ದ ಧ್ವಜವನ್ನು ಕಸಿದುಕೊಂಡ ಪೊಲೀಸರು..
ಕನ್ನಡ ಹೋರಾಟಗಾರನನ್ನು ವಶಕ್ಕೆ ಪಡೆದ ಪೊಲೀಸರು
ನಗರದ ಮರಾಠಾ ಮಂದಿರದಲ್ಲಿ ಎಂಇಎಸ್ ಪ್ರತಿಭಟನಾ ಸಭೆ ನಡೆಸುತ್ತಿತ್ತು. ಈ ವೇಳೆ ಕನ್ನಡ ಧ್ವಜ ಹಿಡಿದು ಅಲ್ಲಿಗೆ ನುಗ್ಗಲು ಯತ್ನಿಸಿದ ಕನ್ನಡ ಪರ ಹೋರಾಟಗಾರ ಎಂಇಎಸ್‌ಗೆ ಧಿಕ್ಕಾರ ಎಂದು ಘೋಷಣೆ ಕೂಗಿ, ಅಡ್ಡಿ ಪಡಿಸಲು ಯತ್ನಿಸಿದರು.
ಮರಾಠಾ ಮಂದಿರ ಮಂಗಲ ಕಾರ್ಯಾಲಯದ ಬಳಿಗೆ ಬರುತ್ತಿದ್ದಂತೆ ಕನ್ನಡ ಪರ ಹೋರಾಟಗಾರನ ಕೈಯಲ್ಲಿದ್ದ ಧ್ವಜವನ್ನು ಕಸಿದುಕೊಂಡ ಪೊಲೀಸರು. ಆತನನ್ನು ತಡೆದು ಜೀಪ್ನಲ್ಲಿ ಕರೆದೊಯ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಂಇಎಸ್ ನಾಯಕಿ ರೇಣು ಕಿಲ್ಲೇಕರ, ಕನ್ನಡ ವಿರೋಧಿ ಘೋಷಣೆ ಕೂಗಿ ಪುಂಡಾಟಿಕೆ ಮೆರೆದರು.