ಕರ್ನಾಟಕ

karnataka

ETV Bharat / state

ಶವದ ಮೇಲಿನ ಒಡವೆಯನ್ನೂ ಬಿಡದ ಖಾಸಗಿ ಆಸ್ಪತ್ರೆ ಸಿಬ್ಬಂದಿ!

ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಮಂಗಳಸೂತ್ರ ಹಾಗೂ ಕಿವಿಯೋಲೆಯನ್ನು ಮುಚ್ಚಿಟ್ಟುಕೊಂಡ ಸಿಬ್ಬಂದಿ, ಪೊಲೀಸ್ ದೂರಿನ ನಂತರ ಕುಟುಂಬಸ್ಥರಿಗೆ ಆಭರಣಗಳನ್ನು ಮರಳಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ನಡೆಗೆ ತೀವ್ರ ಆಕ್ಷೇಪ ಕೇಳಿಬಂದಿದೆ.

A private hospital that does not leave  jewellery on dead body
ಮರೆಯಾದ ಮಾನವೀಯತೆ: ಶವದ ಮೇಲಿನ ಒಡೆವೆಯನ್ನೂ ಬಿಡದ ಖಾಸಗಿ ಆಸ್ಪತ್ರೆ ಸಿಬ್ಬಂದಿ

By

Published : Aug 15, 2020, 5:18 PM IST

ಬೆಳಗಾವಿ: ಅನಾರೋಗ್ಯದಿಂದ ಮೃತಮಟ್ಟ ಮಹಿಳೆಯ ಬಳಿಯಿದ್ದ ಚಿನ್ನದ ಮಂಗಳಸೂತ್ರ ಹಾಗೂ ಕಿವಿಯೋಲೆಯನ್ನು ಆಸ್ಪತ್ರೆ ಸಿಬ್ಬಂದಿ ಕಳ್ಳತನ ಮಾಡಿದ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಬೈಲಹೊಂಗಲ ತಾಲೂಕಿನ ಮಹಿಳೆಯೊಬ್ಬರು ಅನಾರೋಗ್ಯ ಹಿನ್ನೆಲೆಯಲ್ಲಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುವ ಬದಲು ಮೊದಲಿಗೆ ಹಣ ಪಾವತಿಸುವಂತೆ ಪೀಡಿಸಿದ್ದಾರೆ. ಬಳಿಕ‌ ದೊಡ್ಡ ಮೊತ್ತದ ಚೆಕ್ ನೀಡಿದ ನಂತರ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದರು.

ಖಾಸಗಿ ಆಸ್ಪತ್ರೆ ಮುಂದೆ ಮಾಹಿತಿ ನೀಡುತ್ತಿರುವ ಸಂಬಂಧಿಕರು

ದುರ್ದೈವದ ಸಂಗತಿಯೆಂದರೆ, ಮಹಿಳೆ ಬದುಕುಳಿಯಲಿಲ್ಲ. ಸುಮಾರು ಒಂದೂವರೆ ಗಂಟೆಗಳ ಕಾಲ‌ ಆ ಮಹಿಳೆಗೆ ಆ್ಯಂಬುಲೆನ್ಸ್‌ನಲ್ಲಿಯೇ ಆಕ್ಸಿಜನ್ ಅಳವಡಿಸಿ ಇರಿಸಲಾಗಿತ್ತು ಎನ್ನಲಾಗಿದೆ. ಚಿಕಿತ್ಸೆ ಫಲಿಸದೇ ಮಹಿಳೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಒಂದು ರಾತ್ರಿ ಕಳೆಯುವುದರಲ್ಲಿ ಚಿಕಿತ್ಸೆ ನೀಡಿದ್ದಕ್ಕಾಗಿ ಆಸ್ಪತ್ರೆಯವರು ಸುಮಾರು 38 ಸಾವಿರ ರೂ ಬಿಲ್ ಮಾಡಿದ್ದಾರೆ.

ಇದಲ್ಲದೇ ಮೃತಪಟ್ಟ ಮಹಿಳೆ ಮೈಮೇಲಿದ್ದ ಚಿನ್ನದ ಮಂಗಳಸೂತ್ರ ಹಾಗೂ ಕಿವಿಯೋಲೆ ಸೇರಿದಂತೆ ಒಟ್ಟು 20 ಗ್ರಾಂ ಬಂಗಾರದ ಆಭರಣಗಳನ್ನು ಆಸ್ಪತ್ರೆಯ ಸಿಬ್ಬಂದಿ ತೆಗೆದುಕೊಂಡು ಮುಚ್ಚಿಟ್ಟಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಮೃತದೇಹ ತೆಗೆದುಕೊಳ್ಳುವ ಸಮಯದಲ್ಲಿ ಮೃತಮಹಿಳೆಯ ಕುಟುಂಬಸ್ಥರು ಬಂಗಾರದ ಆಭರಣಗಳ ಕುರಿತು ವಿಚಾರಿಸಿದ್ದಾರೆ.

ಆಗ ಉಡಾಫೆ ಉತ್ತರ ನೀಡಿದ ಖಾಸಗಿ ಆಸ್ಪತ್ರೆಯ ವಿರುದ್ಧ ನಗರದ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ‌.‌ ದೂರು ಸ್ವೀಕರಿಸಿ ಆಸ್ಪತ್ರೆಗೆ ತೆರಳಿದ ಪೊಲೀಸರು, ವಿಚಾರಣೆ ನಡೆಸುತ್ತಿದ್ದಂತೆ ಇಲ್ಲಿನ ಸಿಬ್ಬಂದಿ ಕುಟುಂಬಸ್ಥರಿಗೆ ಬಂಗಾರದ ಆಭರಣಗಳನ್ನು ಪೊಲೀಸರ ಸಮ್ಮುಖದಲ್ಲಿ ಹಸ್ತಾಂತರಿಸಿದ್ದಾರೆ.

ಕೊರೊನಾ ವೈರಸ್ ಸಮಯದಲ್ಲಿ ವೈದ್ಯರು ಸೋಂಕಿತರನ್ನು ಬದುಕಿಸಲು ಹಗಲು-ರಾತ್ರಿ ಎನ್ನದೆ ತಮ್ಮ ಕುಟುಂಬ ತೊರೆದು ಸೇವೆ ಮಾಡುತ್ತಿದ್ದಾರೆ. ಆದರೆ ಕೆಲವು ಕಡೆ ಇಂತಹ ಅಮಾನವೀಯ ಘಟನೆ ನಡೆಯುತ್ತಿದ್ದು, ಖಾಸಗಿ ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ABOUT THE AUTHOR

...view details