ಬೆಳಗಾವಿ: ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಬೆಳಗಾವಿಯ ಹಿಂಡಲಗಾ ಜೈಲಲ್ಲಿರುವ ಆರೋಪಿಯೊಬ್ಬರು ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆದಿದ್ದಾರೆ.
ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧೆ ಬೆಳಗಾವಿ ಜಿಲ್ಲೆಯ ಮುಚ್ಛಂಡಿ ಗ್ರಾಮದ ನಿವಾಸಿ ಹಾಗೂ ಶ್ರೀರಾಮ ಸೇನೆ ಹಿಂದೂಸ್ತಾನ್ ಸಂಘಟನೆ ಮುಖಂಡ ಪರಶರಾಮ ಭರಮಾ ಪಾಖರೆ(37) ಜೈಲಲ್ಲಿದ್ದುಕೊಂಡೇ ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ಒಂದನೇ ವಾರ್ಡ್ನಿಂದ ಕಣಕ್ಕಿಳಿದಿದ್ದಾರೆ.
ಆಟೋ ವಾಹನವನ್ನು ಇವರಿಗೆ ಚಿಹ್ನೆಯಾಗಿ ನೀಡಲಾಗಿದೆ. ಮುಚ್ಛಂಡಿ ಗ್ರಾಮದ ಮಹೇಶ ಅವ್ವಾನೆ ಎಂಬಾತನ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಪರಶರಾಮ ವಿರುದ್ಧ ಕೇಳಿ ಬಂದಿದ್ದು, ಎರಡು ತಿಂಗಳ ಹಿಂದೆ ಬಂಧಿತರಾಗಿದ್ದರು. ಈ ಹತ್ಯೆ ಪ್ರಕರಣದಲ್ಲಿ ಪರುಶರಾಮ ನಾಲ್ಕನೇ ಆರೋಪಿ ಆಗಿದ್ದಾರೆ.
ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧೆ ಸ್ನೇಹಿತರ ಒತ್ತಡಕ್ಕೆ ಮಣಿದು ಪರಶರಾಮ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಜೈಲಿನಲ್ಲಿ ನಾಮಪತ್ರಕ್ಕೆ ಸಹಿ ಮಾಡಿಸಿಕೊಂಡು ಸ್ನೇಹಿತರೇ ಪರಶರಾಮ ಪರ ನಾಮಪತ್ರ ಸಲ್ಲಿಸಿದ್ದರು. ಅಲ್ಲದೇ ಮುಚ್ಛಂಡಿ ಗ್ರಾಮದ ಸ್ನೇಹಿತರೇ ಪರುಶರಾಮ ಪರ ಪ್ರಚಾರ ನಡೆಸಿದ್ದರು. ರಕ್ತದಾನ ಶಿಬಿರ, ಲಾಕ್ಡೌನ್ ಸಮಯದಲ್ಲಿ ಬಡವರಿಗೆ ಅಗತ್ಯವಸ್ತುಗಳ ಪೂರೈಕೆ ಸೇರಿದಂತೆ ಪರಶರಾಮ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಈ ಕಾರಣಕ್ಕೆ ಪರಶರಾಮ ಪಾಕರೆ ಗೆಲುವು ಸಾಧಿಸಲಿದ್ದಾರೆ ಎಂದು ಅವರ ಸ್ನೇಹಿತ ಗಜಾನನ ವರತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.