ಕರ್ನಾಟಕ

karnataka

ETV Bharat / state

ಚಿಕ್ಕೋಡಿ: ವಿಚಾರಣಾಧೀನ ಕೈದಿ ಪೊಲೀಸ್​ ಠಾಣೆಯಿಂದಲೇ ಎಸ್ಕೇಪ್​ - chikkodi belgavi latest news

ಕೊಪ್ಪಳ ಸೆಂಟ್ರಲ್ ಜೈಲಿನಿಂದ ಜಶ್ವಂತ್ ಸಿಂಗ್ ಎಂಬ ಕೈದಿಯನ್ನು ಪೊಲೀಸರು ಗುರುವಾರ ಮಧ್ಯರಾತ್ರಿ ಕರೆತಂದಿದ್ದರು. ಇನ್ನೇನು ಬೆಳಗ್ಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ವಿಚಾರಣಾಧೀನ ಕೈದಿಯನ್ನು ಪೊಲೀಸರು ಕರೆದೊಯ್ಯುವ ಮುನ್ನ ವಾಶ್​ ರೂಮ್​​​​ಗೆ ಹೋಗಿ ಬರುತ್ತೇನೆಂದು ಹೇಳಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಅಲ್ಲಿಂದಲೇ ಪರಾರಿಯಾಗಿದ್ದಾನೆ.

Prisoner Escaped from the prison
ಚಿಕ್ಕೋಡಿ: ವಿಚಾರಣಾ ಕೈದಿ ಠಾಣೆಯಿಂದ ಪರಾರಿ

By

Published : Dec 11, 2020, 2:14 PM IST

ಚಿಕ್ಕೋಡಿ:ವಿಚಾರಣಾಧೀನ ಕೈದಿವೋರ್ವ ಠಾಣೆಯಿಂದಲೇ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಇಲ್ಲಿನ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಕೊಪ್ಪಳ ಸೆಂಟ್ರಲ್ ಜೈಲಿನಿಂದ ಜಶ್ವಂತ್ ಸಿಂಗ್ ಎಂಬ ಕೈದಿಯನ್ನು ಪೊಲೀಸರು ಗುರುವಾರ ಮಧ್ಯರಾತ್ರಿ ಕರೆತಂದಿದ್ದರು. ಇನ್ನೇನು ಬೆಳಗ್ಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಕೈದಿಯನ್ನು ಪೊಲೀಸರು ಕರೆದೊಯ್ಯುವ ಮುನ್ನ ವಾಶ್​ ರೂಮ್​​​​ಗೆ ಹೋಗಿ ಬರುತ್ತೇನೆಂದು ಹೇಳಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಅಲ್ಲಿಂದಲೇ ಪರಾರಿಯಾಗಿದ್ದಾನೆ.

ಈ ಸುದ್ದಿಯನ್ನೂ ಓದಿ:ಮಕ್ಕಳಾಗಲಿಲ್ಲವೆಂದು ನೊಂದು ಆತ್ಮಹತ್ಯೆಗೆ ಶರಣಾದ ಹೆಡ್ ಕಾನ್​ಸ್ಟೇಬಲ್

ಜಶ್ವಂತ್​ ಸಿಂಗ್ ವಿರುದ್ಧ ವಿವಿಧ ಠಾಣೆಗಳಲ್ಲಿ ಕಳ್ಳತನ, ಡಕಾಯಿತಿ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ. ಚಿಕ್ಕೋಡಿ ಠಾಣಾ ವ್ಯಾಪ್ತಿಯಲ್ಲೂ ಸಹ ಈ ಹಿಂದೆ ನಡೆದಿದ್ದ ಒಂದು ಕಳ್ಳತನ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ. ಹೀಗಾಗಿ ಆತನನ್ನ ವಿಚಾರಣೆಗೆ ಪೊಲೀಸರು ಕರೆತಂದಿದ್ದರು.

ಸದ್ಯ ಕೈದಿ ಜಶ್ವಂತ್ ಸಿಂಗ್ ಪರಾರಿಯಾಗಿದ್ದು, ಈತ ಮಧ್ಯಪ್ರದೇಶದಲ್ಲಿ ಇದ್ದಾನೆ ಎಂಬ ಮಾಹಿತಿ ಚಿಕ್ಕೋಡಿ ಪೊಲೀಸರಿಗೆ ಲಭ್ಯವಾಗಿದೆ. ಹಾಗಾಗಿ ಪೊಲೀಸರು ಮಧ್ಯಪ್ರದೇಶಕ್ಕೆ ತೆರಳಿ ಜಶ್ವಂತ್ ಸಿಂಗ್​ನ ಶೋಧ ಕಾರ್ಯ ಮುಂದುವರೆಸಿದ್ದಾರೆ.

ABOUT THE AUTHOR

...view details