ಕರ್ನಾಟಕ

karnataka

ETV Bharat / state

ಕೋರ್ಟ್ ಆದೇಶವಿದ್ರೂ ವಿನಯ್ ಕುಲಕರ್ಣಿ ಸಿಬಿಐ ಹಸ್ತಾಂತರಕ್ಕೆ ಜೈಲು ನಿಯಮಾವಳಿಗಳು ಅಡ್ಡಿ!

ಮಾಜಿ ಸಚಿವ ವಿನಯ್ ಕುಲಕರ್ಣಿಯವರನ್ನು ಸಿಬಿಐಗೆ ಹಸ್ತಾಂತರಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಆದರೆ ಅವರ ಹಸ್ತಾಂತರಕ್ಕೆ ಹಿಂಡಲಗಾ ಜೈಲು ನಿಯಮಾವಳಿಗಳು ಅಡ್ಡಿಯಾಗಿವೆ.

extradition
ಜೈಲು ನಿಯಮಾವಳಿಗಳು ಅಡ್ಡಿ..!

By

Published : Nov 6, 2020, 7:59 PM IST

ಬೆಳಗಾವಿ: ಧಾರವಾಡ ಜಿ.ಪಂ.‌ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಿಂದ ಮೂರು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಆದ್ರೆ ಇಂದು ವಿನಯ್ ಕುಲಕರ್ಣಿಯನ್ನು‌ ಸಿಬಿಐಗೆ ಹಸ್ತಾಂತರಿಸಲು ಹಿಂಡಲಗಾ ಜೈಲು ನಿಯಮಾವಳಿಗಳು ಅಡ್ಡಿಯಾಗಿವೆ.

ಮಾಜಿ ಸಚಿವ ವಿನಯ್​ ಕುಲಕರ್ಣಿ ಅವರನ್ನು ಮೂರು ದಿನಗಳ ಕಾಲ ವಶಕ್ಕೆ ನೀಡುವಂತೆ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ವಾದ ಪ್ರತಿವಾದ ಆಲಿಸಿದ ಧಾರವಾಡ ಮೂರನೇ ಹೆಚ್ಚುವರಿ ಸೆಷನ್‌ ನ್ಯಾಯಾಲಯ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು.

ಆದರೆ ಈಗ ಬೆಳಗಾವಿ ಹಿಂಡಲಗಾ ಜೈಲು ನಿಯಮಾವಳಿ ಪ್ರಕಾರ 6.15ಕ್ಕೆ ಲಾಕಪ್ ಕ್ಲೋಸ್ ಆಗಲಿದೆ. ಒಂದು ವೇಳೆ ಕೋರ್ಟ್ ಆದೇಶ ಇದ್ರೂ ಲಾಕಪ್ ಕ್ಲೋಸ್ ಆದ ಬಳಿಕ ಯಾವೊಬ್ಬ ಆರೋಪಿಗಳನ್ನೂ ಹೊರ ಬಿಡದಂತೆ ನಿಯಮವಿದೆ‌. ಹೀಗಾಗಿ ಲಾಕಪ್ ಕ್ಲೋಸ್ ಆದ ಹಿನ್ನೆಲೆ ವಿನಯ್ ಕುಲಕರ್ಣಿ ಸಿಬಿಐ ಅಧಿಕಾರಿಗಳಿಗೆ ಹಸ್ತಾಂತರ ಅನುಮಾನವಾಗಿದೆ.

ಸದ್ಯ ಹಿಂಡಲಗಾ ಜೈಲರ್, ಬಂಧಿಖಾನೆಯ ಮೇಲಾಧಿಕಾರಿಗಳೊಂದಿಗೆ ಮಾತನಾಡುವಂತೆ ಸಿಬಿಐ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಆಗ ಮೇಲಾಧಿಕಾರಿಗಳು ವಿಶೇಷ ಪ್ರಕರಣ ಅಂತಾ ಅನುಮತಿ ಕೊಟ್ಟರೆ ಮಾತ್ರ ಇಂದು ರಾತ್ರಿಯೇ ವಿನಯ್ ಕುಲಕರ್ಣಿ ಸಿಬಿಐಗೆ ಹಸ್ತಾಂತರವಾಗಲಿದ್ದಾರೆ.
ಕೋರ್ಟ್ ಕೇವಲ ಮೂರು ದಿನ ಅಷ್ಟೇ ವಿನಯ್ ಕುಲಕರ್ಣಿಯವರನ್ನ ಸಿಬಿಐ ವಶಕ್ಕೆ ನೀಡಿರುವ ಹಿನ್ನೆಲೆ ಇಂದು ತಡರಾತ್ರಿಯಾದ್ರೂ ಮಾಜಿ ಸಚಿವ ವಿನಯ್​ ಕುಲಕರ್ಣಿಯವರನ್ನು ವಶಕ್ಕೆ ಪಡೆದುಕೊಳ್ಳಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಈ ಕುರಿತು ಸಿಬಿಐ ಅಧಿಕಾರಿಗಳು ಹಾಗೂ ಜೈಲು ಮೇಲಾಧಿಕಾರಿಗಳ ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದೆ‌.

ABOUT THE AUTHOR

...view details