ಕರ್ನಾಟಕ

karnataka

ETV Bharat / state

ಕಾಗವಾಡದಲ್ಲಿ ಪತ್ರಿಕಾ ದಿನಾಚರಣೆ - press day celebration in kagavada

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿಯ ಶ್ರೀ ನರಸಿಂಹ ಮಂದಿರದ ಸಭಾ ಭವನದಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾತನಾಡಿದ ನ್ಯಾಯವಾದಿ ಅಭಯಕುಮಾರ ಅಕಿವಾಟೆ, ಪತ್ರಕರ್ತರ ಕಾರ್ಯವನ್ನು ಶ್ಲಾಘಿಸಿದರು.

ಪತ್ರಿಕಾ ದಿನಾಚರಣೆ
ಪತ್ರಿಕಾ ದಿನಾಚರಣೆ

By

Published : Jan 7, 2020, 10:29 AM IST

ಚಿಕ್ಕೋಡಿ: ದೇಶ ಹಾಗೂ ರಾಜ್ಯದ ಅಭಿವೃದ್ಧಿಯಲ್ಲಿ ಪತ್ರಕರ್ತರ ಕಾರ್ಯ ಅಪಾರವಿದೆ ಎಂದು ಅಥಣಿ ಕೃಷ್ಣಾ ಸಕ್ಕರೆ ಕಾರ್ಖಾನೆ ಮಾಜಿ ಉಪಾಧ್ಯಕ್ಷ ಹಾಗೂ ನ್ಯಾಯವಾದಿ ಅಭಯಕುಮಾರ ಅಕಿವಾಟೆ ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿಯ ಶ್ರೀ ನರಸಿಂಹ ಮಂದಿರದ ಸಭಾಭವನದಲ್ಲಿ ಕಾಗವಾಡ ತಾಲೂಕು ಕಾರ್ಯನಿರತ ಪತ್ರಕರ್ತರು ಆಚರಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಪತ್ರಿಕಾ ದಿನಾಚರಣೆ

ಸಮಾಜ ಪರಿವರ್ತನಾ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಕಾಗವಾಡ ತಾಲೂಕಿನಲ್ಲಿ ಆಗು ಹೋಗುವ ಎಲ್ಲ ಘಟನೆಗಳಲ್ಲಿ ಇಲ್ಲಿಯ ಪತ್ರಕರ್ತರು ನಿಸ್ವಾರ್ಥ ಸೇವೆ ಸಲ್ಲಿಸಿ ಸಹಕರಿಸುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ನ್ಯಾಯ ಒದಗಿಸುವಲ್ಲಿ ಪತ್ರಕರ್ತರ ಸೇವೆ ಅಪಾರವಿದೆ ಎಂದರು.

ABOUT THE AUTHOR

...view details