ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಲಿಕ್ಕರ್​ ಶಾಪ್​​​ ತೆರೆಯಲು ನಡೆದಿದೆ ಭರ್ಜರಿ ಸಿದ್ಧತೆ - Preparing for a liquor store

ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ನಾಳೆಯಿಂದ ರಾಜ್ಯದಲ್ಲಿ ಮದ್ಯ ಮರಾಟ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಬೆಳಗಾವಿಯ ಬಾರ್ ಮಾಲೀಕರು ಬೆಳಿಗ್ಗೆಯಿಂದಲೇ‌ ಸಿದ್ಧತೆ ನಡೆಸಿದ್ದಾರೆ.

Preparing for a liquor store
ಬೆಳಗಾವಿಯಲ್ಲಿ ಬಾರ್​​​ ತೆರೆಯಲು ಭರ್ಜರಿ ಸಿದ್ಧತೆ

By

Published : May 3, 2020, 9:17 PM IST

ಬೆಳಗಾವಿ: ಕೊರೊನಾ ವೈರಸ್ ತಡೆಗೆ ದೇಶದಾದ್ಯಂತ ಕೇಂದ್ರ ಸರ್ಕಾರ ಎರಡು ಬಾರಿ ಲಾಕ್‌ಡೌನ್ ಘೋಷಣೆ ಮಾಡಿದೆ. ಇದರಿಂದಾಗಿ ಎಣ್ಣೆ ಸಿಗದೆ ಪರದಾಡುತ್ತಿರೋ ಎಣ್ಣೆ ಪ್ರಿಯರು ಕಾತುರದಿಂದ ಕಾಯುತ್ತಿದ್ದು, ಈಗಾಗಲೇ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಮಾಡಲು ಬಾರ್ ಅಂಗಡಿಗಳ ಮುಂದೆ ಬರದ ಸಿದ್ಧತೆ ಮಾಡಲಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ನಾಳೆಯಿಂದ ರಾಜ್ಯದಲ್ಲಿ ಮದ್ಯ ಮರಾಟ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಬಾರ್ ಮಾಲೀಕರು ಬೆಳಿಗ್ಗೆಯಿಂದಲೇ‌ ಸಿದ್ಧತೆ ನಡೆಸಿದ್ದಾರೆ. ಇಂದು ಬಾರ್ ಮಾಲೀಕರ ಸಭೆ ನಡೆಸಿದ ಜಿಲ್ಲೆಯ ಅಬಕಾರಿ ಇಲಾಖೆ ಡಿಸಿ ಅನೀಲ್​ಕುಮಾರ ನಾಯಕ್, ವಿವಿಧ ಬಾರ್ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಉಲ್ಲಂಘನೆ ಮಾಡೋ ಬಾರ್ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಬಾರ್ ಹಾಗೂ ಎಂಎಸ್ಐಎಲ್ ಅಂಗಡಿಗಳ ಮುಂದೆ ನೂಕುನುಗ್ಗಲು ಆಗದಂತೆ ತಡೆಯಲು ಮಾಲೀಕರು ತಾವೇ ಕಟ್ಟಿಗೆಯ ಬ್ಯಾರಿಕೇಡ್​​ಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತುಕೊಳ್ಳಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಬಾಕ್ಸ್​​ಗಳನ್ನು ಹಾಕುತ್ತಿದ್ದಾರೆ.

ABOUT THE AUTHOR

...view details