ಕರ್ನಾಟಕ

karnataka

ಮಹಾರಾಷ್ಟ್ರದಲ್ಲಿ ಮಳೆಯ ರೌದ್ರ ನರ್ತನ : ಚಿಕ್ಕೋಡಿ ತಾಲೂಕಿನ ನದಿ ಪಾತ್ರದಲ್ಲಿ ಮುಂಜಾಗೃತೆ!

By

Published : Jul 10, 2020, 11:38 PM IST

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯ ಜೊತೆಗೆ ನದಿ ತೀರದಲ್ಲೂ ಸಹಿತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ನದಿ ನೀರಿನ ಪ್ರಮಾಣ ಏರಿಕೆಯಾಗಿದೆ.

ಚಿಕ್ಕೋಡಿ ತಾಲೂಕಿನ ನದಿ ಪಾತ್ರದಲ್ಲಿ ಮುಂಜಾಗೃತೆ
ಚಿಕ್ಕೋಡಿ ತಾಲೂಕಿನ ನದಿ ಪಾತ್ರದಲ್ಲಿ ಮುಂಜಾಗೃತೆ

ಚಿಕ್ಕೋಡಿ : ಮಹಾ ಮಳೆಯಿಂದ ಕೃಷ್ಣೆಗೆ 46 ಸಾವಿರಕ್ಕೂ ಅಧಿಕ ಕ್ಯೂಸೆಕ್​ನಷ್ಟು ಒಳ ಹರಿವು ಹೆಚ್ಚಳವಾಗಿದ್ದು, ಚಿಕ್ಕೋಡಿ ಉಪ ವಿಭಾಗದ ಆರು ಸೇತುವೆಗಳು ಜಲಾವೃತಗೊಂಡಿದ್ದು, ನದಿ ತೀರದಲ್ಲಿ ಮುಂಜಾಗೃತೆ ವಹಿಸಲಾಗಿದೆ ಎಂದು ತಹಶೀಲ್ದಾರ್​ ಶುಭಾಸ ಸಂಪಗಾಂವಿ ಹೇಳಿದ್ದಾರೆ.

ತಹಶೀಲ್ದಾರ್​ ಕಚೇರಿಯಲ್ಲಿ‌ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ದೂಧಗಂಗಾ ನದಿಗೆ ನಿರ್ಮಿಸಿರುವ ಕಾರದಗಾ-ಭೋಜ, ಭೋಜವಾಡಿ-ಕುನ್ನೂರ, ಸಿದ್ನಾಳ-ಅಕ್ಕೋಳ, ಮಲಿಕವಾಡ-ದತ್ತವಾಡ ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕುನ್ನೂರ-ಬಾರವಾಡ ಸೇತುವೆ ಮತ್ತು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರು-ಕಲ್ಲೋಳ ಸೇತುವೆ ಹೀಗೆ ಚಿಕ್ಕೋಡಿ ಉಪವಿಭಾಗದ ಆರು ಸೇತುವೆಗಳು ಮುಳುಗಡೆಯಾಗಿವೆ.

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯ ಜೊತೆಗೆ ನದಿ ತೀರದಲ್ಲೂ ಸಹಿತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ನದಿ ನೀರಿನ ಪ್ರಮಾಣ ಏರಿಕೆಯಾಗಿದೆ. ಇದರಿಂದ ನದಿ ತೀರದ ಜನರಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ಸ್ಥಳೀಯವಾಗಿ ತಾಲೂಕಿನಲ್ಲಿ ಹೆಚ್ಚಾಗಿ ಮಳೆ ಆಗಿದ್ದು, ಮಹರಾಷ್ಟ್ರದ ರತ್ನಾಗಿರಿ, ಕಾಳಾಮ್ಮವಾಡಿ, ಕೊಲ್ಹಾಪುರ, ಸಾಂಗ್ಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿದ್ದು, ಆ ಮಳೆಯಿಂದ ಕೃಷ್ಣಾ ನದಿಗೆ 46 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಯುತ್ತಿದೆ ಎಂದರು‌.

ಚಿಕ್ಕೋಡಿ ತಾಲೂಕಿನ ನದಿ ಪಾತ್ರದಲ್ಲಿ ಮುಂಜಾಗೃತೆ

ಚಿಕ್ಕೋಡಿ ಉಪವಿಭಾಗದಲ್ಲಿ ಹೆಚ್ಚಿನ ಮಳೆ ಆಯಿತು ಅಂದರೆ ನಾವು ಹೆಚ್ಚಿನ ಕಾಳಜಿಯನ್ನು ವಹಿಸಿ ಪ್ರವಾಹ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದೇವೆ. ಈಗಾಗಲೇ ವಿವಿಧ ಇಲಾಖೆಗಳಿಗೆ ಜವಾದ್ದಾರಿ ನೀಡ್ಡಿದ್ದೇವೆ. ನಮ್ಮ ಭಾಗದಲ್ಲಿ 88‌ ಮಿಲಿ ಮೀಟರ್ ಮಳೆ ಆಗಿದ್ದು, ಮಹಾ ಘಟ್ಟ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗಿದ್ದರ ಪರಿಣಾಮ ಕೃಷ್ಣಾ ನದಿ ಒಳ ಹರಿವು ಹೆಚ್ಚಾಗಿದೆ.

ಈಗಾಗಲೇ ಕೃಷ್ಣಾ ನದಿಗೆ ಹರಿದು ಬರುವ ನೀರಿನ‌ ಪ್ರಮಾಣವನ್ನು ಕೊಯ್ನಾ ಡ್ಯಾಂನಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಅದಲ್ಲದೆ ಆಲಮಟ್ಟಿ ಡ್ಯಾಂನಿಂದ ಹಾಗೂ ಹಿಪ್ಪರಗಿ ಡ್ಯಾಮನಿಂದ ನೀರು ಎಷ್ಟು ಸ್ಟೋರೇಜ್ ಮಾಡುತ್ತಿದ್ದಾರೆ, ಮತ್ತು ಮಳೆ ನೀರು ಎಷ್ಟು ಬರುತ್ತಿದೆ ಎಂಬ ಮಾಹಿತಿಯನ್ನ ಪಡೆದುಕೊಳ್ಳುತ್ತಿದ್ದೇವೆ. ಯಾವಾಗ ನಮಗೆ 1,00,000 ಕ್ಯೂಸೆಕ್ ನೀರು ಒಳಹರಿವು ಜಾಸ್ತಿ ಆಗುತ್ತದೆ. ಆಗಾ ನಮ್ಮ ತಾಲೂಕಿನ ಗ್ರಾಮಗಳಿಗೆ ತೊಂದರೆ ಆಗುತ್ತದೆ. ನಾವು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಜನರನ್ನ ಶಿಫ್ಟ್ ಮಾಡುವಂತಹಾ ವ್ಯವಸ್ಥೆಯನ್ನಾ ಮಾಡುತ್ತೇವೆ ಎಂದರು.

ಈಗಾಗಲೇ 10 ದೋಣಿಗಳು ಇವೆ ಅದರಲ್ಲಿ 7 ದೋಣಿಗಳು ಸುಸಜ್ಜಿತವಾಗಿವೆ. ಇನ್ನು 3 ದೋಣಿಗಳನ್ನ ರಿಪೇರಿ ಮಾಡಿಸುತ್ತಿದ್ದೆವೆ. ಒಟ್ಟು 10 ದೋಣಿಗಳಿಂದ ಜನರಿಗೆ ಏನು ವ್ಯವಸ್ಥೆ ಮಾಡಬೇಕು ಅವುಗಳಿಂದಾ ಮಾಡುತ್ತೇವೆ, ಅದಲ್ಲದೆ ಯಡೂರಿನಲ್ಲಿ 25 ಎನ್‌ಡಿ‌ಆರ್‌ಎಫ್ ತಂಡದವರು ಬಂದಿದ್ದಾರೆ. ಅವರು ಕೂಡಾ ಪ್ರವಾಹ ಸಮಿಕ್ಷೆ ಮಾಡುತ್ತಿದ್ದು ಪ್ರತಿದಿನ ಅದರ ಮಾಹಿತಿಯನ್ನ ನಮಗೆ ನೀಡುತ್ತಿದ್ದಾರೆ. ಅವರ ಮಾಹಿತಿ ಅನುಗುಣವಾಗಿ ನಾವು ಮುಂಜಾಗೃತಾ ಕ್ರಮ ಕೈಗೊಳ್ಳಲಿದ್ದೆವೆ ಎಂದು ಹೇಳಿದರು.

ABOUT THE AUTHOR

...view details