ಬೆಳಗಾವಿ: ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ವಿಚಾರಣೆ ಒಳಪಡಿಸಬೇಕು. ಹಾಗೂ ಅವರ ಸಂಸದ ಸ್ಥಾನ ರದ್ದು ಮಾಡಬೇಕು ಎಂದು ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಪಾರ್ಲಿಮೆಂಟ್ನಲ್ಲಿ ಭದ್ರತಾ ಲೋಪ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ಪಾರ್ಲಿಮೆಂಟ್ನಲ್ಲಿ ಆಗಿರುವ ಭದ್ರತಾ ಲೋಪ ಭಾರಿ ದೊಡ್ಡ ವಿಚಾರ. ದೇಶದ ಸೆಕ್ಯುರಿಟಿಗೆ ಸಂಬಂಧಿಸಿದೆ. ಪಾರ್ಲಿಮೆಂಟ್ ಒಳಗೆ ಯಾರು ಹೋಗಬೇಕು, ಯಾರು ಹೋಗಬಾರದು ಎನ್ನುವುದಿರುತ್ತದೆ. ಪ್ರತಾಪ್ ಸಿಂಹ ಅವರು ಹಿರಿಯ ಸದಸ್ಯರು. ತಮ್ಮ ಪಕ್ಷದವನಿಗೆ ಯಾರಿಗೋ ಪಾಸ್ ನೀಡಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಪ್ರತಾಪ್ ಸಿಂಹ ಅವರನ್ನು ಸಂಸದ ಸ್ಥಾನದಿಂದ ಅಮಾನತು ಮಾಡಬೇಕು ಎಂದು ವಾಗ್ದಾಳಿ ನಡೆಸಿದರು.
ಮೀಟಿಂಗ್ಗಾ ಅಥವಾ ಈಟೀಂಗ್ ಅಂತ ಗೊತ್ತಾಗಿಲ್ಲ:ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಹೌದು ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹೋಗಿದ್ದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನನ್ನ ಗೆಳೆಯ. ಊಟಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಪಾರ್ಟಿ ಮಿಟೀಂಗ್ ಬನ್ನಿ ಅಂತ ಅವರೇನು ಕರೆದಿಲ್ಲ. ನಾನು ಹೋದ ಮೇಲೆ MEETING ಅಥವಾ EATING ಅಂತ ಗೊತ್ತಾಗಿಲ್ಲ. ನಾನು ಹೋಗೋ ಹೊತ್ತಿಗೆ ಆರಂಭ ಆಗಿತ್ತು. ಅರ್ಧ ಗಂಟೆ ಕುಳಿತೆ. ಕಾಂಗ್ರೆಸ್ ನಮ್ಮ ಹಳೇ ಮನೆ. ಸಿಎಂ, ಡಿಸಿಎಂ, ಮಂತ್ರಿಗಳ ಜೊತೆ ಕುಳಿತಿದ್ದೆ ಎಂದು ಸ್ಪಷ್ಟನೆ ನೀಡಿದರು.