ಕರ್ನಾಟಕ

karnataka

ETV Bharat / state

ನಕಲಿ ಗಾಂಧಿಗಳ ಕಾಂಗ್ರೆಸ್ ಪಕ್ಷವನ್ನು ನಂಬಬೇಡಿ: ಪ್ರಹ್ಲಾದ್ ಜೋಶಿ ವ್ಯಂಗ್ಯ - pralhad joshi in Belagavi

ಅರಭಾಂವಿ ಮತಕ್ಷೇತ್ರದ ಮೂಡಲಗಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಗಡಿ ತಂಟೆಯಲ್ಲಿ ಚೀನಾವನ್ನು ಪ್ರಥಮ ಬಾರಿ ಹಿಂದೆ ಕಳಿಸಿದ ಯಶಸ್ಸು ಮೋದಿ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಕೇರಳದಲ್ಲಿ ಕಮ್ಯುನಿಸ್ಟರ ಜೊತೆ ದೋಸ್ತಿ ಬಂಗಾಳದಲ್ಲಿ ಕುಸ್ತಿ ನಡೆಸುತ್ತಿರುವ ನಕಲಿ ಗಾಂಧಿಗಳ ಕಾಂಗ್ರೆಸ್ ಪಕ್ಷವನ್ನು ನಂಬಬೇಡಿ ಎಂದರು.

ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ

By

Published : Apr 6, 2021, 4:49 AM IST

ಬೆಳಗಾವಿ:ಕಾಂಗ್ರೆಸ್ ಕೇರಳದಲ್ಲಿ ಕಮ್ಯುನಿಸ್ಟರ ಜೊತೆ ದೋಸ್ತಿ ಮಾಡಿಕೊಂಡಿದ್ದರೇ ಬಂಗಾಳದಲ್ಲಿ ಕುಸ್ತಿ ನಡೆಸುತ್ತಿದೆ. ಇಂತಹ ನಕಲಿ ಗಾಂಧಿಗಳ ಕಾಂಗ್ರೆಸ್ ಪಕ್ಷವನ್ನು ನಂಬಬೇಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ವ್ಯಂಗ್ಯವಾಡಿದರು.

ಅರಭಾಂವಿ ಮತಕ್ಷೇತ್ರದ ಮೂಡಲಗಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗಡಿ ತಂಟೆಯಲ್ಲಿ ಚೀನಾವನ್ನು ಪ್ರಥಮ ಬಾರಿ ಹಿಂದೆ ಕಳಿಸಿದ ಯಶಸ್ಸು ಮೋದಿ ಅವರಿಗೆ ಸಲ್ಲುತ್ತದೆ ಎಂದರು.

ಬೆಳಗಾವಿಯಲ್ಲಿ ಪ್ರಹ್ಲಾದ್ ಜೋಶಿ ಚುನಾವಣಾ ಪ್ರಚಾರ

ಸೈನಿಕರಿಗೆ ಪಾಕಿಸ್ತಾನದಿಂದ ಬರುವ ಒಂದು ಗುಂಡಿಗೆ ಪ್ರತಿಯಾಗಿ ಹತ್ತು ಗುಂಡು ಹಾರಿಸುವ ಹಕ್ಕನ್ನು ನೀಡಿದೆ. ದೇಶದಲ್ಲಿ ಆರುವರೆ ವರ್ಷಗಳಿಂದ ಭಯೋತ್ಪಾದನೆ ಕೃತ್ಯವನ್ನು ಸಂಪೂರ್ಣವಾಗಿ ತಡೆಯಲಾಗಿದೆ. ಇಂತಹ ಸ್ಥಿರ ಸರ್ಕಾರ ನೀಡುತ್ತಿರುವ ಮೋದಿ ಅವರ ಕಾರ್ಯಕ್ಷಮತೆಗೆ ಬೆಳಗಾವಿ ಸಂಸದರನ್ನಾಗಿ ಮಂಗಲಾ ಸುರೇಶ ಅಂಗಡಿ ಅವರನ್ನು ಆಯ್ಕೆ ಮಾಡುವುದರ ಮೂಲಕ ದೇಶದ ಜನತೆ ಮೋದಿ ಅವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.

ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ವಿಳಾಸ ಕಳೆದುಕೊಂಡ ಕಾಂಗ್ರೆಸ್ ಸುಳ್ಳು ಹೇಳುವುದಲ್ಲಿ ನಿಸ್ಸಿಮವಾಗಿದೆ. ಜನತೆಗೆ ಸುಳ್ಳನ್ನು ಹೇಳುವುದರ ಮೂಲಕ ಮೋಸ ಮಾಡಿ ಸ್ವಾರ್ಥ ರಾಜಕಾರಣದಿಂದ ದೇಶವನ್ನು ಅವನತಿಯತ್ತ ಕೊಂಡೊಯ್ದು ಹಾಳುಮಾಡಿದೆ. ಮೋದಿ ಅವರ ಅಭಿವೃದ್ಧಿಪರ ಕಾರ್ಯವನ್ನು ಕೇವಲ ಟೀಕೆ ಮಾಡುವುದರಲ್ಲಿ ಕಾಲ ಕಳೆಯುತ್ತಿರುವ ಕಾಂಗ್ರೆಸ್​ ದೇಶದ ಅಭಿವೃದ್ಧಿಗೆ ಮಾರಕ ಎಂದರು.

ABOUT THE AUTHOR

...view details