ಬೆಳಗಾವಿ:ಇತ್ತೀಚೆಗೆವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನ ಹಿರಿಯ ಮುಖಂಡ ಪ್ರಕಾಶ್ ಹುಕ್ಕೇರಿ ಜಯಭೇರಿ ಬಾರಿಸಿದ್ದರು. ಚುನಾವಣೆಯಲ್ಲಿ ಗೆದ್ದ ಬಳಿಕ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ಅವರನ್ನು ಪ್ರಕಾಶ ಹುಕ್ಕೇರಿ ಭೇಟಿ ಮಾಡಿದ್ದಾರೆ.
ಪ್ರಭಾಕರ ಕೋರೆ ಹಾಗೂ ಪ್ರಕಾಶ ಹುಕ್ಕೇರಿ ಬಾಲ್ಯ ಸ್ನೇಹಿತರು. ಪ್ರಭಾಕರ್ ಕೋರೆಗೆ ಅಮೆರಿಕದ ಪ್ರತಿಷ್ಠಿತ ವಿವಿಯಿಂದ ಡಾಕ್ಟರೇಟ್ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾದ ಪ್ರಕಾಶ ಹುಕ್ಕೇರಿ ಶುಭ ಕೋರಿದ್ದಾರೆ. ಪ್ರಕಾಶ್ ಹುಕ್ಕೇರಿ-ಪ್ರಭಾಕರ್ ಕೋರೆ ಭೇಟಿ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.