ಕರ್ನಾಟಕ

karnataka

By

Published : Jan 10, 2021, 4:00 PM IST

Updated : Jan 10, 2021, 4:17 PM IST

ETV Bharat / state

ಬೆಳಗಾವಿ ಲೋಕಸಭೆಗೆ ಕಾಂಗ್ರೆಸ್​​ನಿಂದ ಪ್ರಕಾಶ್​​ ಹುಕ್ಕೇರಿ ಟಿಕೆಟ್ ಕೇಳಿದ್ದು ನಿಜ: ಸತೀಶ್​ ಜಾರಕಿಹೊಳಿ‌

ನಿನ್ನೆ ಕಾಂಗ್ರೆಸ್​ ಪಕ್ಷದ ನಾಯಕರು ಲೋಕಸಭೆ ಉಪಚುನಾವಣೆ ಸಂಬಂಧ ಸಭೆ ನಡೆಸಿದ್ದರು. ಈ ಕುರಿತಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಲೋಕಸಭೆ ಉಪಚುನಾವಣೆಗೆ ಈವರೆಗೂ ಯಾವುದೇ ಅಭ್ಯರ್ಥಿಗಳ ಹೆಸರನ್ನು ಶಿಪಾರಸು ಮಾಡಿಲ್ಲ. ಈಗಾಗಲೇ ಐದಾರು ಜನರ ಹೆಸರು ಚಾಲ್ತಿಯಲ್ಲಿವೆ. ಆದರೆ ಯಾವುದೂ ಅಂತಿಮವಲ್ಲ ಎಂದರು.

ಸತೀಶ್​ ಜಾರಕಿಹೊಳಿ‌
Satish Jarakiholi

ಬೆಳಗಾವಿ:ಲೋಕಸಭೆ ಉಪಚುನಾವಣೆಗೆ ಈವರೆಗೂ ಯಾವುದೇ ಅಭ್ಯರ್ಥಿಗಳ ಹೆಸರನ್ನು ಶಿಪಾರಸು ಮಾಡಿಲ್ಲ. ಈಗಾಗಲೇ ಐದಾರು ಜನರ ಹೆಸರು ಚಾಲ್ತಿಯಲ್ಲಿವೆ. ಆದರೆ ಯಾವುದೂ ಅಂತಿಮವಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ‌ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ‌

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಿನ್ನೆ ನಡೆದ ಸಭೆಯಲ್ಲಿ ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಈವರೆಗೂ ಯಾವುದೇ ಅಭ್ಯರ್ಥಿಗಳ ಹೆಸರನ್ನು ಶಿಪಾರಸು ಮಾಡಿಲ್ಲ. ಈಗಾಗಲೇ ಐದಾರು ಜನರ ಹೆಸರು ಕೇಳಿ ಬಂದಿದೆ. ಆದರೆ ಯಾವುದೂ ಅಂತಿಮವಲ್ಲ. ವೈಯಕ್ತಿಕವಾಗಿ ನನಗೆ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇಲ್ಲ. ಪಕ್ಷ ಏನೇ ನಿರ್ಧಾರ ಕೈಗೊಂಡರು ಪಕ್ಷದ ನಿರ್ಣಯಕ್ಕೆ ಬದ್ಧನಾಗಿದ್ದೇನೆ ಎಂದರು.

ಓದಿ: ರಾಧಿಕಾ ಕುರಿತ ಪ್ರಶ್ನೆಗೆ ‘ಯಾರಪ್ಪ ಅವರೆಲ್ಲ? ಅದ್ಯಾರೋ ನಂಗೊತ್ತಿಲ್ಲ’ ಎಂದ ಹೆಚ್‌.ಡಿ.ಕುಮಾರಸ್ವಾಮಿ!

ಕಾಂಗ್ರೆಸ್​​​ನಿಂದ ಪ್ರಕಾಶ್​​ ಹುಕ್ಕೇರಿ ಟಿಕೆಟ್ ವಿಚಾರ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್​​ನಿಂದ ಬೆಳಗಾವಿ ಲೋಕಸಭೆಗೆ ಪ್ರಕಾಶ್​ ಹುಕ್ಕೇರಿ ಟಿಕೆಟ್ ‌ಕೇಳಿದ್ದು ನಿಜ. ಆದರೆ ಅವರ ಹೆಸರನ್ನು ಶಿಪಾರಸು ಮಾಡಿಲ್ಲ. ನಾಳೆ‌ ಧಾರವಾಡದಲ್ಲಿ ಮತ್ತೊಂದು ಸುತ್ತಿನ‌ ಸಭೆ ನಡೆಯಲಿದ್ದು, ಚರ್ಚಿಸಿ ಅಂತಿಮ ಮಾಡಲಾಗುವುದು ಎಂದರು.

Last Updated : Jan 10, 2021, 4:17 PM IST

ABOUT THE AUTHOR

...view details