ಚಿಕ್ಕೋಡಿ : ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ, 30 ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ, ಬೇರೆ ಕಡೆಯಿಂದ ಬಿಜೆಪಿಗೆ ಬಂದಿಲ್ಲ. ಮನೆಯಿಂದ ನೇರವಾಗಿ ನಾನು ಬಿಜೆಪಿಗೆ ಬಂದಿರುವೆ. ನಮಗೆ ಹೈಕಮಾಂಡ್ ಕೈ ಬಿಡ್ತೀವಿ ಅಂತಾ ಹೇಳಿಲ್ಲ ಅಥವಾ ನಮ್ಮ ಪಕ್ಷದ ವರಿಷ್ಠರೂ ಸಹ ಹೇಳಿಲ್ಲ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದರು.
ನಮ್ಮ ಕಾರ್ಯವೈಖರಿ ವರಿಷ್ಠರು ಹೇಗೆ ಪ್ರಮಾಣಿಕರಿಸ್ತಾರೆ?- ಸಚಿವ ಪ್ರಭು ಚೌಹಾಣ್ - ಪ್ರಭು ಚವ್ಹಾಣ ಸುದ್ದಿ
ನಾನು ಮಂತ್ರಿಯಾಗಿ ಒಂದು ವರ್ಷ ಮೇಲಾಯ್ತು, ಇದರಲ್ಲಿ 9 ತಿಂಗಳು ನಾವು ಕೋವಿಡ್ನಲ್ಲೇ ಕಳೆದೆವು..
![ನಮ್ಮ ಕಾರ್ಯವೈಖರಿ ವರಿಷ್ಠರು ಹೇಗೆ ಪ್ರಮಾಣಿಕರಿಸ್ತಾರೆ?- ಸಚಿವ ಪ್ರಭು ಚೌಹಾಣ್ Prabhu Chavana commenting on the High Command's stance](https://etvbharatimages.akamaized.net/etvbharat/prod-images/768-512-9580677-222-9580677-1605693446078.jpg)
ನಮಗೆ ಹೈಕಮಾಂಡ್ ಕೈ ಬಿಡ್ತಿವಿ ಅಂತ ಹೇಳಿಲ್ಲ : ಪ್ರಭು ಚವ್ಹಾಣ
ನಮಗೆ ಹೈಕಮಾಂಡ್ ಕೈ ಬಿಡ್ತೀವಿ ಅಂತಾ ಹೇಳಿಲ್ಲ : ಪ್ರಭು ಚೌಹಾಣ್
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ನಾನು ಮಂತ್ರಿಯಾಗಿ ಒಂದು ವರ್ಷ ಮೇಲಾಯ್ತು, ಇದರಲ್ಲಿ 9 ತಿಂಗಳು ನಾವು ಕೋವಿಡ್ನಲ್ಲೇ ಕಳೆದೆವು. ನಮ್ಮ ಕಾರ್ಯವೈಖರಿಯ ಬಗ್ಗೆ ವರಿಷ್ಠರು ಹೇಗೆ ಪ್ರಮಾಣಿಕರಿಸ್ತಾರೆ.
ಅವರು ನಮ್ಮನ್ನ ಪ್ರಮಾಣಿಸಲು 2 ವರ್ಷವಾದರೂ ಸಮಯ ಬೇಕು. ಇದು ಕೇವಲ ಮಾಧ್ಯಮಗಳ ಸೃಷ್ಠಿ ಎಂದು ಹೇಳಿದರು.