ಕರ್ನಾಟಕ

karnataka

ಟಿಕೆಟ್ ಕೊಟ್ಟರೆ ಲೋಕಸಭೆಗೆ ಸ್ಪರ್ಧಿಸುವೆ; ಪ್ರಭಾಕರ ಕೋರೆ ಪುನರುಚ್ಚಾರ

By

Published : Jan 17, 2021, 3:18 PM IST

ಕೇಂದ್ರ ಗೃಹ ಸಚಿವ ಆಗಮನ ಹಿನ್ನೆಲೆ ಬೆಳಗಾವಿಯಲ್ಲಿ ಪ್ರತ್ಯಕ್ಷವಾಗಿರುವ ಪ್ರಭಾಕರ್​ ಕೋರೆ, ಸಿಎಂ ಬದಲಾವಣೆ ಕುರಿತಂತೆ ಆರ್​ಎಸ್​ಎಸ್​ ಮೂಲದಿಂದ ಖಚಿತ ಮಾಹಿತಿ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯನವರದ್ದು ಯಾವುದೋ ಬೇರೆ ಆರ್​ಎಸ್​ಎಸ್​ ಇರಬಹುದೇನೋ ಎಂದು ಟಾಂಗ್​ ನೀಡಿದ್ದಾರೆ.

prabhakar kore talks about siddaramaiah
ಪ್ರಭಾಕರ್ ಕೋರೆ ಹೇಳಿಕೆ

ಬೆಳಗಾವಿ: ಲೋಕಸಭಾ ಉಪ ಚುನಾವಣಾ ಟಿಕೆಟ್ ಆಕಾಂಕ್ಷಿಗಳ ದಂಡು ಬೆಳಗಾವಿಗೆ ಜಿಲ್ಲೆಗೆ ದೌಡಾಯಿಸುತ್ತಿದೆ. ಈ ಮಧ್ಯೆ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ‌ ಮಾಡಲು ಪ್ರಭಾಕರ್ ಕೋರೆ ಆಗಮಿಸಿದ್ದು, ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಪ್ರಭಾಕರ್ ಕೋರೆ ಹೇಳಿಕೆ
ಬೆಳಗಾವಿ ಲೋಕಸಭೆ ಟಿಕೆಟ್ ಆಕಾಂಕ್ಷೆ ಆಗಿರುವ ಪ್ರಭಾಕರ್ ಕೋರೆ, ಬೆಳಗಾವಿಯ ಕತ್ತಿ ಒಡೆತನದ UK 27 ಹೊಟೇಲ್​ನಲ್ಲಿ ಮಾತುಕತೆ ನಡೆಸಲಿದ್ದು, ಲೋಕಸಭೆ ಟಿಕೆಟ್ ಲಾಬಿ ನಡೆಸುತ್ತಿದ್ದಾರಾ ಕೋರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಮಿತ್ ಶಾ ಆಗಮನ ಹಿನ್ನೆಲೆ ಬೆಳಗಾವಿಯಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಶಾಸಕ‌ ಅರವಿಂದ ಬೆಲ್ಲದ, ಪ್ರಭಾಕರ್ ಕೋರೆ, ಮಹಾಂತೇಶ ಕವಟಗಿಮಠ, ಸಂಜಯ ಪಾಟೀಲ, ಸಿಸಿ ಪಾಟೀಲ, ದುರ್ಯೋಧನ ಐಹೊಳೆ ಮುಂತಾದವರು ಭಾಗಿಯಾಗಿದ್ದಾರೆ.
ಏಪ್ರಿಲ್ ನಂತರ ಸಿಎಂ ಬದಲಾವಣೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ‌ವಿಚಾರವಾಗಿ ಪ್ರಭಾಕರ‌ ಕೋರೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರದ್ದು ಯಾವುದೋ ಬೇರೆ ಆರ್​ಎಸ್​ಎಸ್ ಇರಬಹುದು ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. ಅಮಿತ್ ಶಾ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದಿದ್ದಾರೆ. ನಾನು ರಾಜಕೀಯದಿಂದ ನಿವೃತ್ತಿ ಆಗಿಲ್ಲ, ಪಕ್ಷ ಅವಕಾಶ ಕೊಟ್ಟರೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಇದೇ ವೇಳೆ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್​ ಕೋರೆ ತಿಳಿಸಿದ್ರು.

TAGGED:

ABOUT THE AUTHOR

...view details