ಕರ್ನಾಟಕ

karnataka

ETV Bharat / state

ಬಿಟ್‌ಕಾಯಿನ್ ವಿವಾದ: ಸಿಎಂ ಬೊಮ್ಮಾಯಿ ಬೆನ್ನಿಗೆ ನಿಂತ ಡಾ.ಪ್ರಭಾಕರ ಕೋರೆ

ಬಿಟ್‌ಕಾಯಿನ್ (Bitcoin) ದಂಧೆ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಸಿಎಂ ಬೊಮ್ಮಾಯಿ ವಿರುದ್ಧ ಹೇಳಿದ್ದ ಹೇಳಿಕೆಗೆ ಡಾ. ಪ್ರಭಾಕರ ಕೋರೆ (Prabhakar kore) ತೀವ್ರ ಅಸಮಾಧಾನ ಹೊರಹಾಕಿದ್ದು, ಸಿಎಂ ಪರ ಬ್ಯಾಟ್​ ಬೀಸಿದ್ದಾರೆ.

Prabhakar kore reaction on bitcoin issue
ಡಾ. ಪ್ರಭಾಕರ ಕೋರೆ ಹೇಳಿಕೆ

By

Published : Nov 10, 2021, 7:50 PM IST

ಬೆಳಗಾವಿ:ಬಿಟ್‌ಕಾಯಿನ್ ದಂಧೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬಲಿ ಪಡೆಯಲಿದೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ರಾಜ್ಯಸಭೆ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ (Prabhakar Kore) ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಫೆಲ್ ವಿಚಾರವಾಗಿ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. ಆದರೀಗ ರಫೆಲ್ ಯುದ್ಧವಿಮಾನ ಖರೀದಿಯಲ್ಲಿ (Rafale fighter deal) ಕಾಂಗ್ರೆಸ್ ನಾಯಕರು ಕಿಕ್ ಬ್ಯಾಕ್ ಪಡೆದಿರುವುದು ಬಹಿರಂಗಗೊಂಡಿದೆ. ಬಿಟ್‌ಕಾಯಿನ್(bitcoin) ಮಟ್ಕಾ ಇದ್ದ ಹಾಗೆ.ರಾಜಕೀಯ ನಾಯಕರು ಸೇರಿ ಎಲ್ಲರೂ ಮಟ್ಕಾ ಆಡುತ್ತಾರೆ, ಅವರೇ ಆಡಿರಬೇಕು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಬೊಮ್ಮಾಯಿ ಸಿಎಂ ಆದ್ಮೇಲೆ ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯ ಸರಿಪಡಿಸುತ್ತಿದ್ದಾರೆ. ಮುಂಬೈ‌ ಕರ್ನಾಟಕ ಪ್ರದೇಶವನ್ನು 'ಕಿತ್ತೂರು ಕರ್ನಾಟಕ' (Kittur Karnataka)ಎಂದು ಮರುನಾಮಕರಣ ಮಾಡಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ನೀಡುವುದಾಗಿ ಹೇಳಿದ್ದಾರೆ. ಎರಡು ವರ್ಷದಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಆಗಿರಲಿಲ್ಲ. ಅಧಿವೇಶನ ನಡೆಸಲು ಸರ್ಕಾರ ಕ್ರಮ ವಹಿಸಿದ್ದಾರೆ ಎಂದರು.

ಬೆಳಗಾವಿಯಲ್ಲಿ ವರ್ಷಕ್ಕೊಮ್ಮೆ ಅಧಿವೇಶನ ನಡೆಯಬೇಕು. ಬೆಳಗಾವಿಯಲ್ಲಿ ಶಾಸಕರ ಭವನ, ಮಂತ್ರಿ ಭವನ ನಿರ್ಮಾಣ ಆಗಬೇಕು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸಿಎಂ ಹಾಗೂ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ(Basavaraja Bommai) ಜತೆ ಮಾತನಾಡಿದ್ದೇನೆ. ಶಾಸಕರ ಭವನ ಆದರೆ ಪ್ರತಿ ವರ್ಷ ಅಧಿವೇಶನ ನಡೆಯುತ್ತದೆ. ಈ ಸಲ ಅಧಿವೇಶನ ನಡೆಸುತ್ತಿರೋದು ಖುಷಿ ತಂದಿದೆ. ಹೆಸ್ಕಾಂಗೆ ಕಿತ್ತೂರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ಎನ್‌ಡಬ್ಲ್ಯೂಕೆಆರ್‌ಟಿಸಿಗೆ ಕಿತ್ತೂರು ಕರ್ನಾಟಕ ಸಾರಿಗೆ ನಿಗಮ ಎಂದು ಮರುನಾಮಕರಣ ಮಾಡಬೇಕು ಎಂದು ಸರ್ಕಾರಕ್ಕೆ ಕೋರೆ ಆಗ್ರಹಿಸಿದ್ದಾರೆ.

ನನ್ನ ಮಿತ್ರನಿಗೆ ಟಿಕೆಟ್ ಸಿಗಲಿದೆ:

ಎರಡು ಸ್ಥಾನಗಳ ಪರಿಷತ್ ‌ಚುನಾವಣೆಯಲ್ಲಿ ಬಿಜೆಪಿ ಒಂದೇ ಸ್ಥಾನಕ್ಕೆ ಸ್ಪರ್ಧೆ ಮಾಡಲಿದೆ. ಉಳಿದ ಪಕ್ಷದವರು ಎಷ್ಟು ಸ್ಥಾನಕ್ಕೆ ಸ್ಪರ್ಧೆ ಮಾಡಲಿದ್ದಾರೆ ಎಂಬುದು ಗೊತ್ತಿಲ್ಲ, ಅವರನ್ನೇ ಕೇಳಬೇಕು. ನನ್ನ ಆತ್ಮೀಯ ಮಿತ್ರ ಮಹಾಂತೇಶ ಕವಟಗಿಮಠ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ನಮ್ಮ ಪಕ್ಷದವರು ಅವರಿಗೆ ಟಿಕೆಟ್ ಕೊಡಬಹುದು ಎಂದರು. ಇದೇ ವೇಳೆ ನಾನು ಪರಿಷತ್ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಪ್ರಭಾಕರ್​ ಕೋರೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ನೀವಿಲ್ಲದ ನಿಜವನ್ನು ಈಗಲೂ ನಂಬೋಕೆ ಆಗ್ತಿಲ್ಲ: ರಜಿನಿಕಾಂತ್‌ ಕಂಬನಿ

ABOUT THE AUTHOR

...view details