ಕರ್ನಾಟಕ

karnataka

By

Published : Jul 27, 2020, 11:42 PM IST

ETV Bharat / state

ಈಟಿವಿ ಭಾರತ ಇಂಪ್ಯಾಕ್ಟ್: ಸ್ಮಶಾನ ಕಾವಲುಗಾರರಿಗೆ ಪಿಪಿಇ ಕಿಟ್ ಪೂರೈಸಿದ ಜಿಲ್ಲಾಡಳಿತ

ಸ್ಮಶಾನ ಕಾವಲುಗಾರರು ಹಾಗೂ ಪಾಲಿಕೆಯ ಆ್ಯಂಬುಲೆನ್ಸ್‌ನಲ್ಲಿ ಜನಸಾಮಾನ್ಯರ ಶವ ತರುತ್ತಿದ್ದ ಚಾಲಕರು ಮಾಸ್ಕ್ ಹಾಗೂ ಪಿಪಿಇ ಕಿಟ್ ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದರು. ಮಹಾನಗರ ಪಾಲಿಕೆಯ ಬೇಜವಾಬ್ದಾರಿ ಬಗ್ಗೆ ಈಟಿವಿ ಭಾರತ ವರದಿ ಮೂಲಕ ಜಿಲ್ಲಾಡಳಿತ ಗಮನ ಸೆಳೆದಿತ್ತು.

ಸ್ಮಶಾನ ಕಾವಲುಗಾರರಿಗೆ ಪಿಪಿಇ ಕಿಟ್ ಪೂರೈಸಿದ ಜಿಲ್ಲಾಡಳಿತ
ಸ್ಮಶಾನ ಕಾವಲುಗಾರರಿಗೆ ಪಿಪಿಇ ಕಿಟ್ ಪೂರೈಸಿದ ಜಿಲ್ಲಾಡಳಿತ

ಬೆಳಗಾವಿ: ಜೀವ ಭಯದಲ್ಲೇ ಕಾರ್ಯನಿರ್ವಹಿಸುತ್ತಿರುವ ಸ್ಮಶಾನ ಸಿಬ್ಬಂದಿ ಸಂಕಷ್ಟಕ್ಕೆ ಜಿಲ್ಲಾಡಳಿತ ಸ್ಪಂದಿಸಿದೆ. ಸ್ಮಶಾನ ಕಾವಲುಗಾರ ಹಾಗೂ ಆ್ಯಂಬುಲೆನ್ಸ್ ಚಾಲಕರಿಗೆ ಜಿಲ್ಲಾಡಳಿತ ಪಿಪಿಇ ಕಿಟ್ ಪೂರೈಸಿದೆ.

ಸ್ಮಶಾನ ಕಾವಲುಗಾರರಿಗೆ ಪಿಪಿಇ ಕಿಟ್ ಪೂರೈಸಿದ ಜಿಲ್ಲಾಡಳಿತ

ಇದನ್ನು ಓದಿ: ಪಿಪಿಇ ಕಿಟ್ ಧರಿಸದೇ ಅಂತ್ಯ ಸಂಸ್ಕಾರ; ಸಿಬ್ಬಂದಿಗೆ ಕಿಟ್​ ನೀಡದ ಬೆಳಗಾವಿ ಪಾಲಿಕೆ?

ಈ ಕುರಿತು ನಿನ್ನೆಯಷ್ಟೇ 'ಈಟಿವಿ ಭಾರತ' ವರದಿ ಮಾಡಿತ್ತು. ಈ ವರದಿ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಮಶಾನ ಸಿಬ್ಬಂದಿಗೆ ಮಾಸ್ಕ್, ಪಿಪಿಇ ಕಿಟ್ ನೀಡಿದ್ದಾರೆ. ಈ ಮೊದಲು ಸ್ಮಶಾನ ಕಾವಲುಗಾರರು ಹಾಗೂ ಪಾಲಿಕೆಯ ಆ್ಯಂಬುಲೆನ್ಸ್‌ನಲ್ಲಿ ಜನಸಾಮಾನ್ಯರ ಶವ ತರುತ್ತಿದ್ದ ಚಾಲಕರು ಮಾಸ್ಕ್ ಹಾಗೂ ಪಿಪಿಇ ಕಿಟ್ ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದರು. ಮಹಾನಗರ ಪಾಲಿಕೆಯ ಬೇಜವಾಬ್ದಾರಿ ಬಗ್ಗೆ 'ಈಟಿವಿ ಭಾರತ' ಜಿಲ್ಲಾಡಳಿತದ ಗಮನ ಸೆಳೆದಿತ್ತು.

ABOUT THE AUTHOR

...view details