ಕರ್ನಾಟಕ

karnataka

ETV Bharat / state

ವಿದ್ಯುತ್​ ಶಾರ್ಟ್​​ ಸರ್ಕ್ಯೂಟ್​​: ಹೊತ್ತಿ ಉರಿದ ಎರಡು ಮಳಿಗೆಗಳು - ಅಗ್ನಿಶಾಮಕ ದಳ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ನಿಂದ ಎರಡು ಮಳಿಗೆಗಳು ಧಗಧಗನೇ ಹೊತ್ತಿ ಉರಿದಿವೆ.

Power short circuit in Belagavi
ಹೊತ್ತಿ ಉರಿದ ಎರಡು ಮಳಿಗೆಗಳು

By

Published : Jan 11, 2020, 7:44 PM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ನಿಂದ ಎರಡು ಮಳಿಗೆಗಳು ಧಗಧಗನೇ ಹೊತ್ತಿ ಉರಿದಿದ್ದು, ಮಳಿಗೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಎಲೆಕ್ಟ್ರಿಕ್​​​ ವಸ್ತುಗಳ ಮಳಿಗೆ ಹಾಗೂ ಚಪ್ಪಲಿ ಅಂಗಡಿಗೆ ಬೆಂಕಿ ಆಹುತಿಯಾಗಿದೆ. ಇವು ಮಾರುತಿ ಹಾಗೂ ಪಾಂಡುರಂಗ ಪಾಂಡ್ರೆ ಎಂಬವರಿಗೆ ಸೇರಿದ ಮಳಿಗೆಗಳು ಎಂಬ ಬಗ್ಗೆ ಮಾಹಿತಿ ದೊರೆತಿದೆ.

ಹೊತ್ತಿ ಉರಿದ ಎರಡು ಮಳಿಗೆಗಳು

ಬೆಂಕಿ ನಂದಿಸಿದ ಸ್ಥಳೀಯರು:

ಬೆಂಕಿ ತಗುಲುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಆದರೆ, ಸಿಬ್ಬಂದಿ ತಡವಾಗಿ ಬಂದ ಕಾರಣ ಸ್ಥಳೀಯರೇ ಬೆಂಕಿ ನಂದಿಸಿದರು. ಸಮಯಕ್ಕೆ ಸರಿಯಾಗಿ ಬಾರದ ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಕ್ರಮಕ್ಕೆ ಆಗ್ರಹಿಸಿದರು.

ABOUT THE AUTHOR

...view details