ಅಥಣಿ:ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ಅಥಣಿ ನೂತನ ಬಸ್ ನಿಲ್ದಾಣ ಉದ್ಘಾಟನ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಭಾಷಣ ಮಾಡುತ್ತಿರುವ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಆಯೋಜಕರು ಮುಜುಗರಕ್ಕೊಳಗಾಗುವ ಪ್ರಸಂಗ ಎದುರಾಯಿತು.
ಡಿಸಿಎಂ ಸವದಿ ಭಾಷಣ ವೇಳೆ ಕಣ್ಣಾಮುಚ್ಚಾಲೆಯಾಡಿದ ಕರೆಂಟ್ - Laksman savadi speech in athani bus stop
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ಅಥಣಿ ನೂತನ ಬಸ್ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಭಾಷಣದ ವೇಳೆ ವಿದ್ಯುತ್ ಸ್ಥಗಿತಗೊಂಡಿದ್ದು, ಸಭಿಕರು ಕೆಲ ಕಾಲ ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿತ್ತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೈ ಕೊಟ್ಟ ಕರೆಂಟ್
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಡಿಸಿಎಂ, ಸಭೆಯನ್ನುದ್ದೇಶಿಸಿ ಮಾತನಾಡುವ ಸಂದರ್ಭ ವಿದ್ಯುತ್ ಸಂಪರ್ಕ ಕಟ್ಟಾದ್ದರಿಂದ ಕೆಲಹೊತ್ತು ಸಭೆಯಲ್ಲಿ ಕತ್ತಲೆ ವಾತಾವರಣ ಸೃಷ್ಟಿಯಾಗಿತ್ತು. ಕಾರ್ಯಕ್ರಮದ ಆಯೋಜಕರು ಇದರಿಂದ ಮುಜುಗರಕ್ಕೊಳಗಾಗಿದ್ದು, ಏನು ಮಾಡಬೇಕೆಂದು ತೋಚದೆ ಕೊನೆಗೂ ಜನರೇಟರ್ ಮೊರೆ ಹೋಗಿದ್ದು, ಕೃತಕ ಬೆಳಕಿನ ಸಹಾಯದಿಂದ ಡಿಸಿಎಂ ಸವದಿ ತಮ್ಮ ಭಾಷಣ ಮುಂದುವರೆಸಿದರು.