ಚಿಕ್ಕೋಡಿ(ಬೆಳಗಾವಿ):ಕಳಪೆ ರಸ್ತೆ ಕಾಮಗಾರಿ ವಿರೋಧಿಸುತ್ತಿದ್ದಂತೆ ಗುತ್ತಿಗೆದಾರರು 24 ಗಂಟೆಯಲ್ಲಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.
ಕಳಪೆ ಕಾಮಗಾರಿ ಆರೋಪ: ಪ್ಯಾಚ್ ವರ್ಕ್‌ಗೆ ಮುಂದಾದ ಗುತ್ತಿಗೆದಾರ - Chikkodi in Belgaum district
ಕಳಪೆ ರಸ್ತೆ ಕಾಮಗಾರಿ ವಿರೋಧಿಸುತ್ತಿದ್ದಂತೆ ಗುತ್ತಿಗೆದಾರರು 24 ಗಂಟೆಯಲ್ಲಿ ರಸ್ತೆ ದುರಸ್ತಿಗೆ ಮುಂದಾಗಿರುವ ಘಟನೆ ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.
ಕಳಪೆ ಕಾಮಗಾರಿ ಆರೋಪ: ಪ್ಯಾಚ್ ವರ್ಕ್‌ಗೆ ಮುಂದಾದ ಗುತ್ತಿಗೆದಾರ
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಜತ್ರಾಟ ವೇಸ್‌ನಲ್ಲಿರುವ ಅಂಬೇಡ್ಕರ್ ಸರ್ಕಲ್ವರೆಗಿನ ಕಾಮಗಾರಿ ಕಳಪೆಯಾಗಿದ್ದು, ರಸ್ತೆ ನಿರ್ಮಾಣವಾದ 15 ದಿನಗಳಲ್ಲಿಯೇ ಹದಗೆಟ್ಟಿತ್ತು. ಈ ಹಿನ್ನೆಲೆ ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಧಾರಾಕಾರ ಮಳೆ ಬಂದಿದ್ದರಿಂದ ತರಾತುರಿಯಲ್ಲಿ ಬೇಕಾಬಿಟ್ಟಿಯಾಗಿ ರಸ್ತೆ ಕಾಮಗಾರಿ ಮಾಡಿ ಮುಗಿಸಿದ್ದು, ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಗುತ್ತಿಗೆದಾರ 24 ಗಂಟೆಗಳಲ್ಲಿಯೇ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.