ಕರ್ನಾಟಕ

karnataka

ETV Bharat / state

ಸೂರಿಗಾಗಿ ಅಂಗಲಾಚ್ಚುತ್ತಿರುವ ಬಡ ಕುಟುಂಬ..ಅಧಿಕಾರಿಗಳ ವಿರುದ್ಧ ಆಕ್ರೋಶ

ಪ್ರತಿ ವರ್ಷ ಮಳೆಗೆ ಹಾನಿಯಾದ ಮನೆಗಳ ಸಮೀಕ್ಷೆ ಹಾಗೂ ವಸತಿ ನಿರಾಶ್ರಿತರ ಸಮೀಕ್ಷೆ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ನಮಗೆ ಮನೆ ಮಂಜೂರು ಮಾಡಿ ಕೊಡುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ ‌. ಕಳೆದ ಎಂಟು ವರ್ಷಗಳಿಂದ ಪುರಸಭೆ ಅಧಿಕಾರಿಗಳಿಗೆ ದಿನನಿತ್ಯ ಪರಿಪರಿಯಾಗಿ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಪೂಜೇರಿ ಕುಟುಂಬ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

A picture of the house where the Pujeri family is currently living
ಪೂಜೇರಿ ಕುಟುಂಬದವರ ಸದ್ಯ ವಾಸಿಸುತ್ತಿರುವ ಮನೆಯ ಚಿತ್ರ

By

Published : Dec 17, 2022, 3:48 PM IST

ಸೂರಿಗಾಗಿ ಅಂಗಲಾಚ್ಚುತ್ತಿರುವ ಸೊನವ್ವ ಅಜ್ಜಿ

ಚಿಕ್ಕೋಡಿ: ಬಡವರಿಗೆ ಅನಕೂಲವಾಗಲಿ, ಮನೆ ಕಳೆದು ಕೊಂಡವರಿಗೆ ಮನೆ ಸಿಗಲಿ‌ ಎಂಬ ಹಿತದೃಷ್ಟಿಯಿಂದ ಸರ್ಕಾರ ಹಲವಾರು ವಸತಿ ಯೋಜನೆಗಳನ್ನು ಜಾರಿಗೆ ತಂದರೂ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಚಾ ಶಕ್ತಿ ಕೊರತೆಯಿಂದಾಗಿ ಒಂದು ಬಡ ಕುಟುಂಬ ನಿತ್ಯ ಆತಂಕದಲ್ಲಿ ಜೀವನ ಕಳೆಯುವಂತಾಗಿದೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಸೋನವ್ವ ಪೂಜೇರಿ ಅಜ್ಜಿ ಸೂಕ್ತ ನಿವಾಸ ಇಲ್ಲದೇ, ಪ್ರತಿಕ್ಷಣವೂ ಆತಂಕದಲ್ಲಿ ಜೀವನ ಕಳೆಯುವಂತಾಗಿದೆ. ಕಳೆದ ಎಂಟು ವರ್ಷಗಳಿಂದ ಪುರಸಭೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಆಶ್ರಯ ಯೊಜನೆಯಲ್ಲಿ ಮನೆ ಮಂಜೂರಾತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ, ದಯವಿಟ್ಟು ನನಗೊಂದು ನಿವಾಸ ಕೊಡಿಸುವಂತೆ ಬಡ ಕುಟುಂಬ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ.

ಪ್ರತಿ ವರ್ಷ ಮಳೆಗೆ ಹಾನಿಯಾದ ಮನೆಗಳ ಸಮೀಕ್ಷೆ ಹಾಗೂ ವಸತಿ ನಿರಾಶ್ರಿತರ ಸಮೀಕ್ಷೆ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ನಮಗೆ ಮನೆ ಮಂಜೂರು ಮಾಡಿ ಕೊಡುತ್ತಿಲ್ಲವೆಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಪುರಸಭೆ ಅಧಿಕಾರಿಗಳಿಗೆ ನಿತ್ಯ ಪರಿಪರಿಯಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಪೂಜೇರಿ ಕುಟುಂಬ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋನವ್ವ ಪೂಜೇರಿ ತನ್ನ ಇಬ್ಬರು ಗಂಡು ಮಕ್ಕಳು, ಇಬ್ಬರು ಸೊಸೆ ಹಾಗೂ ಪುಟಾಣಿ ಮೊಮ್ಮಕ್ಕಳೊಂದಿಗೆ ಇಂತಹ ಒಡಕು ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ತೀರಾ ಬಡತನದ ಸುಳಿಯಲ್ಲಿರುವ ಈ ಕುಟಂಬ ಮಳೆ ಬಂದರೆ ದೇವಸ್ಥಾನದಲ್ಲಿ ಆಶ್ರಯವನ್ನು ಪಡೆಯುವಷ್ಟು ಸಂಕಷ್ಟದಲ್ಲಿದ್ದಾರೆ. ಇನ್ನಾದರೂ ಸರ್ಕಾರ ಈ ಬಡ ಕುಟುಂಬಕ್ಕೆ ಆಶ್ರಯ ನೀಡಿ ಬೆಳಕಾಗಲಿ ಎಂಬುದೇ ಎಲ್ಲರ ಆಶಯ.

ಇದನ್ನೂ ಓದಿ:ನಿಪ್ಪಾಣಿಯಲ್ಲಿ ರೈತ ಸ್ನೇಹಿ ಕೃಷಿ ವಿಮಾನದ ಪ್ರಯೋಗ

ABOUT THE AUTHOR

...view details