ಕರ್ನಾಟಕ

karnataka

ETV Bharat / state

ಸತೀಶ್ ಜಾರಕಿಹೊಳಿ ಪ್ಲಾನ್​ಗೆ ಸಹೋದರ ರಮೇಶ್ ಜಾರಕಿಹೊಳಿ ಶಾಕ್! - Gokak election news 2019

ಉಪಚುನಾವಣೆ ಕೆಲವೇ ದಿನಗಳು ಬಾಕಿ ಇರುವಂತೆ ಗೋಕಾಕ್​ನಲ್ಲಿ ಮತ್ತೆ ರಾಜಕೀಯದಾಟ ಮುಂದುವರಿದಿದೆ. ಗೋಕಾಕ್​ ನಗರಸಭೆ, ಕೊಣ್ಣೂರ ಪುರಸಭೆ ಹಾಗೂ ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯತ್​ನ ಕೆಲ ಕಾಂಗ್ರೆಸ್​ ಸದಸ್ಯರು ನಗರದಲ್ಲಿ ಶಕ್ತಿ ಪ್ರದರ್ಶನ ಮಾಡಿ, ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಗೋಕಾಕ್​ ಮತಕ್ಷೇತ್ರದ ಹಿಡಿತ ಸಾಧಿಸಬೇಕೆಂಬ ಶಾಸಕ ಸತೀಶ್ ಜಾರಕಿಹೊಳಿ ಪ್ಲಾನ್​‌ಗೆ ಸಹೋದರ ರಮೇಶ್ ಜಾರಕಿಹೊಳಿ ಶಾಕ್ ನೀಡಿದ್ದಾರೆ.

ಸತೀಶ್ ಜಾರಕಿಹೊಳಿಗೆ ರಮೇಶ್ ಜಾರಕಿಹೊಳಿ ಶಾಕ್

By

Published : Nov 2, 2019, 1:10 PM IST

ಗೋಕಾಕ್​: ಗೋಕಾಕ್​ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಕಳೆದ 3 ದಿನಗಳ ಹಿಂದೆ ತಾ.ಪಂ. ಸದಸ್ಯರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಇಂದು ಕಾಂಗ್ರೆಸ್​ಗೆ ಮಾತ್ತೊಂದು ಶಾಕ್​ ಎದುರಾಗಿದೆ.

ಇಂದು ಗೋಕಾಕ್​ ನಗರಸಭೆಯ 20, ಕೊಣ್ಣೂರ ಪುರಸಭೆಯ 23, ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯತ್​ನ 17 ಸದಸ್ಯರು ನಗರದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಸೇರಿದ ಸದಸ್ಯರು, ದೇವಿಯ ದರ್ಶನ ಪಡೆದು ಅಲ್ಲಿಂದ ಬೆಳಗಾವಿಗೆ ತೆರಳಿದ್ದಾರೆ. ಬೆಳಗಾವಿಯಲ್ಲಿ ಸಂಸದ ಸುರೇಶ್​ ಅಂಗಡಿ ಭೇಟಿಯಾಗಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಹೋದರ ರಮೇಶ್ ಜಾರಕಿಹೊಳಿ ಶಾಕ್

ಇವರೆಲ್ಲರೂ ರಮೇಶ್ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ. ಗೋಕಾಕ್​ ಮತಕ್ಷೇತ್ರದ ಹಿಡಿತ ಸಾಧಿಸಬೇಕೆಂಬ ಶಾಸಕ ಸತೀಶ್ ಜಾರಕಿಹೊಳಿ ಪ್ಲಾನ್​‌ಗೆ ಸಹೋದರ ರಮೇಶ್ ಜಾರಕಿಹೊಳಿ ಶಾಕ್ ನೀಡಿದ್ದಾರೆ. ಇಲ್ಲಿಯವರೆಗೂ ಶಾಸಕ ಸತೀಶ್ ಜಾರಕಿಹೊಳಿ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ಕೆಲ ಸದಸ್ಯರು ಅವರಿಗೆ ಕೈಕೊಟ್ಟು ರಮೇಶ್ ಜಾರಕಿಹೊಳಿ ಗುಂಪಿಗೆ ಹಾರಿದ್ದಾರೆ. ಗೋಕಾಕ್​ ಕ್ಷೇತ್ರದಲ್ಲಿ ಇನ್ನೇನು ಮ್ಯಾಜಿಕ್​ ನಡಿಯುತ್ತೊ ಕಾದು ನೋಡಬೇಕು.

ABOUT THE AUTHOR

...view details