ಅಥಣಿ(ಬೆಳಗಾವಿ):ಅಥಣಿ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರೊಂದಿಗೆ ಸಾವಿನ ಪ್ರಕರಣಗಳ ಏರಿಕೆ ಆಗುತ್ತಿದ್ದು, ನಿತ್ಯ ಗ್ರಾಮಗಳಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.
ಕಷ್ಟಕಾಲದಲ್ಲಿ ಚುನಾಯಿತ ಪ್ರತಿನಿಧಿಗಳು ನಮ್ಮ ನೆರವಿಗೆ ಬರುತ್ತಾರೆ ಎಂಬ ಅಥಣಿ ಜನತೆ ನಿರೀಕ್ಷೆ ಅಕ್ಷರಶಃ ಸುಳ್ಳಾಗಿದೆ. ಜನರು ಅನಾಥವಾಗಿರುವ ವಾತಾವರಣ ಮೂಡಿದೆ.
ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಬ್ ಜೊಲ್ಲೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಅಥಣಿಗೆ ಈವರೆಗೆ ಭೇಟಿ ನೀಡಿಲ್ಲ. ಅಧಿಕಾರಿಗಳ ಜೊತೆ ಒಂದೇ ಒಂದು ಸಭೆ ನಡೆಸಿಲ್ಲ, ಇದರಿಂದ ಅಧಿಕಾರಿಗಳಿಗೆ ಯಾರು ಮಾರ್ಗದರ್ಶನ ನೀಡುವವರು ಎಂಬಂತಾಗಿದೆ.