ಬೆಳಗಾವಿ:ಪೊಲೀಸ್ ಠಾಣೆಯ ಎದುರು ಮಗನಿಂದಲೇ ತಂದೆಯ ಕೊಲೆಗೆ ಯತ್ನ ನಡೆದಿರುವ ಘಟನೆ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.
ಪೊಲೀಸ್ ಠಾಣೆ ಎದುರೇ ಬರ್ಬರ ಹತ್ಯೆ ಯತ್ನ; ಮಚ್ಚಿನಿಂದ ಕುತ್ತಿಗೆ ಕುಯ್ದ ಮಕ್ಕಳು..! - ಫಕೀರಪ್ಪ ಮುರಾರಿ
ಪೊಲೀಸ್ ಠಾಣೆಯ ಎದುರು ಮಗನಿಂದಲೇ ತಂದೆಯ ಕೊಲೆಗೆ ಯತ್ನ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.
ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಫಕೀರಪ್ಪ ಲಚ್ಚಮ್ಮನವರ (61) ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ. ಫಕೀರಪ್ಪ ಅವರ ಪುತ್ರ ಶಂಕರಪ್ಪ ಲಚ್ಚಮ್ಮನವರ (31) ಹಾಗೂ ಅಣ್ಣನ ಮಗ ಶಿವಪ್ಪ ಲಚ್ಚಮ್ಮನವರ (30) ಹತ್ಯೆಗೆ ಯತ್ನಿಸಿದ್ದಾರೆ.
ಫಕೀರಪ್ಪ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮಾರಕಾಸ್ತ್ರಗಳಿಂದ ಕುತ್ತಿಗೆಗೆ ಹೊಡೆದು ಪರಾರಿಯಾಗಲು ಯತ್ನಿಸಿದ ದುಷ್ಕರ್ಮಿಗಳನ್ಮು ಕಿತ್ತೂರು ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿಯಿಂದ ವ್ಯಕ್ತಿ ಸ್ಥಳದಲ್ಲೇ ನರಳುತ್ತಿದ್ದು, ಠಾಣೆ ಎದುರಿನ ರಸ್ತೆಯ ಮೇಲೆ ವ್ಯಕ್ತಿಯ ರಕ್ತ ನೀರಿನಂತೆ ಹರಿಯುತ್ತಿದೆ. ಘಟನೆಗೆ ಇನ್ನೂ ಕಾರಣ ತಿಳಿದುಬಂದಿಲ್ಲ.