ಚಿಕ್ಕೋಡಿ(ಬೆಳಗಾವಿ): ಗಡಿಯಲ್ಲಿ ಶಿವಸೇನೆ ಪುಂಡರು ನಡೆಸುತ್ತಿದ್ದ ಉದ್ಧಟತನಕ್ಕೆ ಬೆಳಗಾವಿ ಪೊಲೀಸರು ಬ್ರೇಕ್ ಹಾಕಿದ್ದಾರೆ. ಎಂಇಎಸ್ ನಡೆಸುತ್ತಿದ್ದ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಲು ಬರುತ್ತಿದ್ದ 50ಕ್ಕೂ ಅಧಿಕ ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರನ್ನು ಗಡಿಯಿಂದ ವಾಪಸ್ ಕಳುಹಿಸಿದ್ದಾರೆ.
ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹೊರವಲಯದಲ್ಲಿರುವ ಕೊಗನೊಳ್ಳಿ ಚೆಕ್ ಪೋಸ್ಟ್ ಮೂಲಕ ಬರುತ್ತಿದ್ದ ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಬಣದ ಶಿವಸೇನೆ ಕೊಲ್ಲಾಪುರ ಅಧ್ಯಕ್ಷ ವಿಜಯ್ ದೇವಣೆ ನೇತೃತ್ವದಲ್ಲಿ ಬೆಳಗಾವಿ ಪ್ರವೇಶ ಬಯಸಿದ್ದರು.
ಕೈಯಲ್ಲಿ ವಿಜಯ ಜ್ಯೋತಿ ಹಿಡಿದು ಬೆಳಗಾವಿಯಲ್ಲಿ ನಾಳೆ ನಡೆಯುವ ಕನ್ನಡ ರಾಜ್ಯೋತ್ಸವ ವಿರುದ್ಧವಾಗಿ ಎಂಇಎಸ್ ನವರು ಕರಾಳ ದಿನಾಚರಣೆ ನಡೆಸುತ್ತಿದ್ದಾರೆ. ಆ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಲು ವಿಜಯ್ ದೇವಣೆ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಕಾರ್ಯಕರ್ತರು ಬೆಳಗಾವಿಗೆ ಪ್ರವೇಶಿಸಲು ಯತ್ನಿಸಿದರು.
ಶಿವಸೇನೆ ಕಾರ್ಯಕರ್ತರಿಂದ ಪ್ರತಿಭಟನೆ ಈ ವೇಳೆ ಶಿವಸೇನೆ ಪುಂಡಾಟಿಕೆಗೆ ಗಡಿಯಲ್ಲೇ ಬ್ರೇಕ್ ಹಾಕಿದರು. ಈ ವೇಳೆ ಠಾಕ್ರೆ ಬಣದ ಶಿವಸೇನೆ ಹಾಗೂ ಕರ್ನಾಟಕ ಪೊಲೀಸರ ನಡುವೆ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ಅರ್ಧಗಂಟೆ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ವಾಪಸ್ ತೆರಳಿದರು.
ಓದಿ:40 ಪರ್ಸೆಂಟ್ ಕಮಿಷನ್ ವಿರುದ್ಧ ಕಾಂಗ್ರೆಸ್ ಮುಖಂಡರ ಪ್ರತಿಭಟನೆ: ಹುಬ್ಬಳ್ಳಿ ಬಿಜೆಪಿ ಕಚೇರಿ ಎದುರು ಹೈಡ್ರಾಮಾ