ಚಿಕ್ಕೋಡಿ (ಬೆಳಗಾವಿ):ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿಅಕ್ರಮವಾಗಿ ಗಾಂಜಾ ಹೊಂದಿದ್ದ ವ್ಯಕ್ತಿಯ ಮನೆ ಮೇಲೆ ಪೋಲಿಸರು ದಾಳಿ ನಡೆಸಿ, ಸುಮಾರು 250 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡು, ವ್ಯಕ್ತಿಯನ್ನು ಬಂಧಿಸಿದ್ದಾರೆ.
ಚಿಕ್ಕೋಡಿ: ಒಣ ಗಾಂಜಾ ವಶಪಡಿಸಿಕೊಂಡ ಪೋಲಿಸರು - ಗಾಂಜಾ ವಶಪಡಿಸಿಕೊಂಡ ಪೋಲಿಸರು
250 ಗ್ರಾಂ ಒಣ ಗಾಂಜಾ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಬಂಧಿಸಲಾಗಿದೆ.

arrest
ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಜನತಾ ಪ್ಲಾಟ್ ನಿವಾಸಿ ಲಗಮಣ್ಣಾ ಮನವಡ್ಡರ ಮನೆಯಲ್ಲಿ 250 ಗ್ರಾಂ ಒಣ ಗಾಂಜಾ ಪತ್ತೆಯಾಗಿದ್ದು, ಖಚಿತ ಮಾಹಿತಿ ಮೆರೆಗೆ ಪೋಲಿಸರು ದಾಳಿ ನಡೆಸಿ ಆರೋಪಿ ಸಮೇತ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.