ಕರ್ನಾಟಕ

karnataka

ETV Bharat / state

ಮೂಡಲಗಿ; 55 ಕ್ವಿಂಟಲ್ ಪಡಿತರ ಅಕ್ಕಿ ವಶ, ಓರ್ವನ ಬಂಧನ - illegally collected 55 quintals of rice

ಬಡವರಿಗೆ ಹಂಚುವ ಪಡಿತರ ಅಕ್ಕಿಯನ್ನು ಹಳ್ಳೂರು ಗ್ರಾಮದ ಬಾಹುಬಲಿ ಸಪ್ತಸಾಗರ ಇವರ ತೋಟದ‌ ಮನೆಯ ಶೆಡ್‌ನಲ್ಲಿ‌ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, 55 ಕ್ವಿಂಟಲ್​ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

55 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡ ಪೊಲೀಸರು
55 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡ ಪೊಲೀಸರು

By

Published : Jan 11, 2021, 4:36 PM IST

ಚಿಕ್ಕೋಡಿ:ಬೆಳಗಾವಿ‌ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 55 ಕ್ವಿಂಟಲ್ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

55 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡ ಪೊಲೀಸರು

ಮೂಡಲಗಿ ಪಿಎಸ್‌ಐ ಕಿರಣ ಮೋಹಿತೆ ಮತ್ತು ಸುನಿಲ್​​ ದೇಸಾಯಿ ಆಹಾರ‌ ನಿರೀಕ್ಷಕರು ಗೋಕಾಕ್​​ (ಪ್ರಭಾರ ಮೂಡಲಗಿ) ಇವರು ಜಂಟಿಯಾಗಿ ದಾಳಿ ಮಾಡಿ, ಅಕ್ರಮವಾಗಿ ಸಂಗ್ರಹಿಸಿಟ್ಟ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಓದಿ:ಸಿಎಂ ಬದಲಾವಣೆ ಬಗ್ಗೆ ಡಿಕೆಶಿಗೆ ಕನಸು ಬಿದ್ದಿದ್ರೆ ಅವರನ್ನೇ ಕೇಳಿ: ಶಿವರಾಮ‌ ಹೆಬ್ಬಾರ್

ಬಡವರಿಗೆ ಹಂಚುವ ಪಡಿತರ ಅಕ್ಕಿಯನ್ನು ಹಳ್ಳೂರು ಗ್ರಾಮದ ಬಾಹುಬಲಿ ಸಪ್ತಸಾಗರ ಇವರ ತೋಟದ‌ ಮನೆಯ ಶೆಡ್‌ನಲ್ಲಿ‌ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. ಇದರ ಖಚಿತ ಮಾಹಿತಿ‌ ಮೇರೆಗೆ ಪೊಲೀಸರು ಹಾಗೂ ಆಹಾರ ಇಲಾಖೆ ಸಿಬ್ಬಂದಿ ದಾಳಿ ಮಾಡಿ, ಆರೋಪಿ‌ ಬಾಹುಬಲಿಯನ್ನು ಬಂಧಿಸಿ‌ ಮೂಡಲಗಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details