ಬೆಳಗಾವಿ: ಹಿಜಾಬ್ - ಕೇಸರಿ ವಿವಾದದ ಕಿಚ್ಚು ರಾಜ್ಯಕ್ಕೆ ವ್ಯಾಪಿಸುತ್ತಿದ್ದು, ಬೆಳಗಾವಿಯ ಕಾಲೇಜುಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಇಂದು ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ಸಾಧ್ಯತೆ ಹಿನ್ನೆಲೆ ನಗರದ ಕಾಲೇಜುಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಕಣ್ಗಾವಲು ಇರಿಸಲಾಗಿದೆ.
ಹಿಜಾಬ್ - ಕೇಸರಿ ವಿವಾದ: ಬೆಳಗಾವಿ ಕಾಲೇಜುಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
ಇಂದು ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ಸಾಧ್ಯತೆ ಹಿನ್ನೆಲೆ ನಗರದ ಕಾಲೇಜುಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಕಣ್ಗಾವಲು ಇರಿಸಲಾಗಿದೆ.
ಕಾಲೇಜುಗಳಲ್ಲಿ ಪೊಲೀಸ್ ಸಿಬ್ಬಂದಿ ನೇಮಕ
ನಗರದ ಜ್ಯೋತಿ ಕಾಲೇಜು, ಸರ್ದಾರ್ ಕಾಲೇಜು, ಆರ್.ಎನ್ ಶೆಟ್ಟಿ ಕಾಲೇಜು, ಲಿಂಗರಾಜ್ ಕಾಲೇಜು, ಆರ್.ಎಲ್.ಎಸ್ ಕಾಲೇಜುಗಳಿಗೆ ಭದ್ರತೆ ನೀಡಲಾಗಿದ್ದು, ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಭದ್ರತೆ ಪರಿಶೀಲನೆ ನಡೆಸಿದ್ದಾರೆ.
ಓದಿ:ಹಿಜಾಬ್-ಕೇಸರಿ ಶಾಲು ವಿವಾದ : ಮಾಧ್ಯಮದವರ ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವ ಮಾಧುಸ್ವಾಮಿ!