ಕರ್ನಾಟಕ

karnataka

ETV Bharat / state

ಪರಿಹಾರಕ್ಕಾಗಿ ಮೊರೆಯಿಟ್ಟ ರೈತರನ್ನು 10 ಘಂಟೆಗಳ ನಂತರ ಬಿಡುಗಡೆ ಮಾಡಿದ್ರು! - ರೈತರನ್ನು ವಶಕ್ಕೆ ಪಡೆದ ಪೊಲೀಸರು

ನೆರೆ ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸಿಎಂ ಕಾರಿಗೆ ಘೇರಾವ್ ಹಾಕಿದ ರೈತರನ್ನು ಪೊಲೀಸರು 10 ಗಂಟೆಗಳ ಕಾಲ ವಶಕ್ಕೆ ಪಡೆದಿದ್ದಾರೆ.

ಸಿಎಂ ಕಾರಿಗೆ ಘೇರಾವ್ ಹಾಕಿದ ರೈತರು 10 ಘಂಟೆಗಳ ನಂತರ ಬಿಡುಗಡೆ..!

By

Published : Oct 4, 2019, 11:09 PM IST

ಬೆಳಗಾವಿ :ನೆರೆ ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿ ಇಂದು ನಗರದಲ್ಲಿ ಸಿಎಂ ಕಾರಿಗೆ ಘೇರಾವ್ ಹಾಕಿದ ರೈತ ಸಂಘದ ಕಾರ್ಯಕರ್ತರನ್ನು ಸುಮಾರು 10 ಘಂಟೆಗಳ ಕಾಲ ಪೊಲೀಸರು ವಶಕ್ಕೆ ಪಡೆದಿದ್ದರು.

ಪ್ರವಾಹ ಪರಿಹಾರದ ಪ್ರಗತಿ ಪರಿಶೀಲನಾ ಸಭೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ರೈತ ಸಂಘಟನೆ ಮುಖಂಡರು ಸಿಎಂ ಕಾರಿಗೆ ಮುತ್ತಿಗೆ ಹಾಕಿ, ಪ್ರವಾಹದಲ್ಲಿ ಹಾನಿಯಾದ ರೈತರ ಬೆಳೆಗಳಿಗೆ ಹಾಗೂ ಒಂದು ಎಕರೆಗೆ 1 ಲಕ್ಷ ರೂ ಪರಿಹಾರ ಧನವನ್ನು ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಿಎಂ ಕಾರಿಗೆ ಘೇರಾವ್ ಹಾಕಿದ್ರು.

ಸಿಎಂ ಕಾರಿಗೆ ಘೇರಾವ್ ಹಾಕಿದ ರೈತರು 10 ಘಂಟೆಗಳ ನಂತರ ಬಿಡುಗಡೆ..!

ಈ ಹಿನ್ನೆಲೆ ಬೆಳಿಗ್ಗೆ ರೈತರನ್ನು ವಶಕ್ಕೆ ಪಡೆದಿದ್ದ ರೈತರು 10 ಘಂಟೆಗಳ ನಂತರ ಎಲ್ಲಾ ರೈತರನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಪೊಲೀಸ್ ಠಾಣೆಯಿಂದ ಹೊರಬಂದ ರೈತರು ಡಿಸಿಎಂ ಸವದಿ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದ್ದು ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಮಾಡಲು ಮುಂದಾಗಿದ್ದಾರೆ.

ABOUT THE AUTHOR

...view details