ಬೆಳಗಾವಿ : ಲಾಕ್‌ಡೌನ್ ನಡುವೆಯೂ ವಾರದ ಸಂತೆ ಮಾಡುತ್ತಿದ್ದ ಜಿಲ್ಲೆಯ ಖಾನಾಪೂರ ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಲಾಕ್‌ಡೌನ್ ನಡುವೆ ವಾರದ ಸಂತೆ: ಪೊಲೀಸರಿಂದ ಲಾಠಿ ಚಾರ್ಜ್ - lackdown news in belgavi
ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ಎಂದಿನಂತೆ ಶನಿವಾರದ ಸಂತೆಯನ್ನು ವ್ಯಾಪಾರಿಗಳು ಆರಂಭಿಸಿದ್ದರು. ಈ ವೇಳೆ ಗುಂಪು ಗುಂಪಾಗಿ ಸೇರಿದ್ದ ಜನರನ್ನು ಚದುರಿಸಲು ಖಾನಾಪುರ ಪೊಲೀಸರು ಲಾಠಿ ಬೀಸಿದರು.
ಪೊಲೀಸರಿಂದ ಲಾಠಿ ಚಾರ್ಜ್
ಜಿಲ್ಲೆಯಲ್ಲಿ ನಿನ್ನೆ ಮೂರು ಕೊರೊನಾ ಪಾಸಿಟಿವ್ ಕೇಸ್ ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಆದರೆ ಇದನ್ನು ಲೆಕ್ಕಿಸದೆ ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ಎಂದಿನಂತೆ ಶನಿವಾರದ ಸಂತೆಯನ್ನು ವ್ಯಾಪಾರಿಗಳು ಆರಂಭಿಸಿದ್ದರು.
ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಗುಂಪು ಗುಂಪಾಗಿ ಸೇರಿದ್ದ ಜನರನ್ನು ಚದುರಿಸಲು ಲಾಠಿ ಬೀಸಿದ್ದಾರೆ. ಈ ವೇಳೆ ವ್ಯಾಪಾರಕ್ಕೆ ತಂದ ತರಕಾರಿಗಳನ್ನು ಹಾಗೂ ವಸ್ತುಗಳೆಲ್ಲ ಬಿಟ್ಟು ವ್ಯಾಪಾರಿಗಳು, ಗ್ರಾಹಕರು ದಿಕ್ಕಾಪಾಲಾಗಿ ಓಡಿ ಹೋದರು.