ಕರ್ನಾಟಕ

karnataka

ETV Bharat / state

ಆರಕ್ಷಕರಿಗೆ ನಾಲ್ಕನೇ ಶನಿವಾರ ಕಡ್ಡಾಯ ರಜೆಗೆ ಒತ್ತಾಯಿಸಿ ಪ್ರತಿಭಟನೆ - ಬಾಬಾಸಾಹೇಬ್ ಅಂಬೇಡ್ಕರ್

ಪೊಲೀಸರ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದ್ದು, ಬೇರೆ ನೌಕರರಿಗೆ ದೊರೆಯುವ ರಜಾ ಅವಧಿ ಪೊಲೀಸರಿಗೂ ನೀಡಬೇಕು. ಪ್ರಾಮಾಣಿಕತೆಯಿಂದ ಸಮಾಜದ ಸೇವೆ ಮಾಡುವ ಪೊಲೀಸರ ಹಿತರಕ್ಷಣೆ ಕಾಯುವ ಔರಾದ್ಕರ್ ವರದಿ ಜಾರಿ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.

ಪ್ರತಿಭಟನೆ

By

Published : Jun 24, 2019, 6:43 PM IST

ಬೆಳಗಾವಿ:ಪೊಲೀಸರ ಹಿತ ರಕ್ಷಣೆ ಕಾಯುವ ಔರಾದ್ಕರ್ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ನಗರದಲ್ಲಿ ಇಂದು ಬಾಬಾಸಾಹೇಬ್ ಅಂಬೇಡ್ಕರ್ ಯುವ ಸಂಘಟನೆಯಿಂದ ಪ್ರತಿಭಟನೆ‌ ನಡೆಯಿತು.

ಪೊಲೀಸರ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದ್ದು, ಬೇರೆ ನೌಕರರಿಗೆ ದೊರೆಯುವ ರಜಾ ಅವಧಿ ಪೊಲೀಸರಿಗೂ ನೀಡಬೇಕು. ಪ್ರಾಮಾಣಿಕತೆಯಿಂದ ಸಮಾಜದ ಸೇವೆ ಮಾಡುವ ಪೊಲೀಸರ ಹಿತರಕ್ಷಣೆ ಕಾಯುವ ಔರಾದ್ಕರ್ ವರದಿ ಜಾರಿ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.

ಆರಕ್ಷಕರಿಗೆ ನಾಲ್ಕನೇ ಶನಿವಾರ ಕಡ್ಡಾಯ ರಜೆ ಒತ್ತಾಯಿಸಿ ಪ್ರತಿಭಟನೆ

ನಗರದ ಚೆನ್ನಮ್ಮ ವೃತ್ತದಿಂದ ಪ್ರಾರಂಭವಾದ ಪ್ರತಿಭಟನೆ ಜಿಲ್ಲಾಧಿಕಾರಿ ಕಚೇರಿವರೆಗೂ ಜಾಥಾ ನಡೆಸಿ ಮನವಿ ಸಲ್ಲಿಕೆ ಮಾಡಲಾಯಿತು.

ಮನವಿ ಸಲ್ಲಿಕೆಯ ಬಳಿಕ ಮಾತನಾಡಿದ ಗಜಾನನ ದೇವರಮನಿ, ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಮೇಲಧಿಕಾರಿಗಳು ಹಗಲು ರಾತ್ರಿ, ಹಬ್ಬ- ಹರಿದಿನಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಾರೆ. ಹೀಗಾಗಿ ಆರಕ್ಷಕರಿಗೂ ನಾಲ್ಕನೇ ಶನಿವಾರ ಕಡ್ಡಾಯವಾಗಿ ರಜೆ ನೀಡಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details