ಕರ್ನಾಟಕ

karnataka

ETV Bharat / state

ಬೆಳಗಾವಿ: ಒಂದೇ ದಿನ 2 ಕೋಟಿ 73 ಲಕ್ಷ ರೂಪಾಯಿ ಜಪ್ತಿ- ಡಿಸಿ ಮಾಹಿತಿ - belagavi dc talk

ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಇಲ್ಲಿಯವರೆಗೆ ಬೆಳಗಾವಿ ಜಿಲ್ಲೆಯಲ್ಲಿ 9 ಕೋಟಿ‌ 1 ಲಕ್ಷ ರೂಪಾಯಿ ಹಣ ಮತ್ತು 2 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮದ್ಯ ಜಪ್ತಿ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್​ ಮಾಹಿತಿ ನೀಡಿದರು.

reduce-money-power-in-election-dc-nitesh-patil
ಈ ಬಾರಿ ಚುನಾವಣೆಯಲ್ಲಿ ಮನಿ ಪವರ್ ಕಡಿಮೆ ಮಾಡುತ್ತೇವೆ: ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್​

By

Published : Apr 5, 2023, 5:02 PM IST

Updated : Apr 5, 2023, 10:10 PM IST

ಬೆಳಗಾವಿಯಲ್ಲಿ ಅಪಾರ ಪ್ರಮಾಣದ ನಗದು ಜಪ್ತಿ

ಬೆಳಗಾವಿ:ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮನಿ ಪವರ್ ಕಡಿಮೆ ಮಾಡಿ, ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಯುವಂತಹ ವಾತಾವರಣ ನಿರ್ಮಿಸಲು ನಮ್ಮೆಲ್ಲ ತಂಡಗಳು ಒಳ್ಳೆಯ ರೀತಿ ಕೆಲಸ ಮಾಡುತ್ತಿವೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್​ ತಿಳಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 62 ಚೆಕ್ ಪೋಸ್ಟ್​​ಗಳನ್ನು ಸ್ಥಾಪಿಸಿದ್ದೇವೆ. ಇಂದು ಹಿರೇಬಾಗೇವಾಡಿ ಚೆಕ್ ಪೋಸ್ಟ್​​ನಲ್ಲಿ 2 ಕೋಟಿ ರೂ. ನಗದು ಸಿಕ್ಕಿದೆ. ಹಿರೇಬಾಗೇವಾಡಿ ಪಿಎಸ್ಐ ನೇತೃತ್ವದ ಫ್ಲೈಯಿಂಗ್ ಸ್ಕ್ವಾಡ್ ಕಾರ್ಯಾಚರಣೆ ಮಾಡಿ ನಗದು ಜಪ್ತಿ ಮಾಡಿದ್ದಾರೆ. ನಿನ್ನೆ ಬೇರೆ ಕಡೆ 73 ಲಕ್ಷ ರೂ. ಸಿಕ್ಕಿದೆ. ಹೀಗಾಗಿ ಒಂದೇ ದಿನ 2 ಕೋಟಿ 73 ಲಕ್ಷ ರೂ. ನಗದು ಸಿಕ್ಕಂತಾಗಿದೆ. ಇಲ್ಲಿವರೆಗೆ ಜಿಲ್ಲೆಯಲ್ಲಿ ಸುಮಾರು 9 ಕೋಟಿ‌ 1 ಲಕ್ಷ ರೂ.‌ ನಗದು ಮತ್ತು ಗಿಫ್ಟ್ ಸೇರಿ ಮತ್ತಿತರ ವಸ್ತುಗಳು ಹಾಗೂ 2 ಕೋಟಿ ರೂ. ಹೆಚ್ಚು ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದೇವೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡ, ಚೆಕ್ ಪೋಸ್ಟ್ , ವಿಡಿಯೋ ಸರ್ವಿಲನ್ಸ್ ತಂಡ ಸೇರಿ ಎಲ್ಲರೂ ಪೊಲೀಸ್ ಕಮಿಷನರ್ ಮತ್ತು ಎಸ್ಪಿ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಪಂಚಾಯತಿ ಸಿಇಓ, ಎಂಸಿಸಿ ಹೆಡ್ ಕೂಡ ಇದ್ದಾರೆ. 24 ಅಂತಾರಾಜ್ಯ ಚೆಕ್ ಪೋಸ್ಟ್​​ಗಳನ್ನು ಸ್ಥಾಪಿಸಲಾಗಿದ್ದು, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಅಬಕಾರಿ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಬಿಸಿಲು ಸ್ವಲ್ಪ ಕಡಿಮೆ ಆಗುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಎಲ್ಲ ಚೆಕ್ ಪೋಸ್ಟ್​​ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದೇವೆ. ಅವುಗಳನ್ನು ಜಿಲ್ಲಾಧಿಕಾರಿ, ಎಸ್​ಪಿ ಹಾಗೂ ಪೊಲೀಸ್ ಕಮಿಷನರ್ ಕಚೇರಿಗಳಲ್ಲಿ ಒಂದು ಕಂಟ್ರೋಲ್ ರೂಮ್ ಮಾಡಿದ್ದೇವೆ. ಅಲ್ಲಿ 24/7 ಮೂರು ಶಿಫ್ಟ್​​ಗಳಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ 10 ಗಂಟೆಗೆ ಆ ದಿನದ ಜಪ್ತಿಯಾದ ಲೆಕ್ಕವನ್ನು ಚುನಾವಣಾ ಆಯೋಗಕ್ಕೆ 62 ಚೆಕ್ ಪೋಸ್ಟ್​ಗಳ‌ ವರದಿಯನ್ನು ಕಳಿಸುತ್ತೇವೆ. ಅದೇ ರೀತಿ ರಾಜಕೀಯ ಪಕ್ಷಗಳು ಅನುಮತಿ ಪಡೆದುಕೊಂಡೇ ಸಭೆ ಸಮಾರಂಭ ಮಾಡುತ್ತಿದ್ದಾರೆ. ಅದರ ಖರ್ಚು ವೆಚ್ಚದ ಲೆಕ್ಕವನ್ನೂ ಸಹ ಚುನಾವಣಾ ಆಯೋಗಕ್ಕೆ ಕಳಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್​ ತಿಳಿಸಿದರು.

ಪ್ರತ್ಯೇಕ ಪ್ರಕರಣದಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿ ಚೆಕ್​ಪೋಸ್ಟ್​ನಲ್ಲಿ ಪೊಲೀಸರು ಅಕ್ರಮವಾಗಿ ಸಾಗಿಸುತ್ತಿದ್ದ 11 ಲಕ್ಷ 49 ಸಾವಿರ ರೂ. ಹಣವನ್ನು ವಶಕ್ಕೆ ಪಡೆಸಿಕೊಂಡಿದ್ದಾರೆ. ಕುಶಾಲ್ ಔಜಾ ಎಂಬುವರು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಸಾವಂತವಾಡಿಯಿಂದ ಕೊಲ್ಲಾಪುರಕ್ಕೆ ದಾಖಲೆ ಇಲ್ಲದೇ ಹಣ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಖಲೆ ಇಲ್ಲದ ಹಣ ವಶಕ್ಕೆ:ಕೊಡಗು ಜಿಲ್ಲೆಯ ಗಡಿ ಭಾಗದ ಚೆಕ್​ ಪೋಸ್ಟ್​​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.6 ಲಕ್ಷ ಹಣವನ್ನು ಚುನಾವಣಾಧಿಕಾರಿಗಳು ಇಂದು ವಶಪಡಿಸಿಕೊಂಡಿದ್ದಾರೆ. ಕೊಡಗು ಜಿಲ್ಲಾ ಚುನಾವಣಾ ಅಧಿಕಾರಿಗಳಿಂದ ಗಡಿ ಬಾಗದ ಚೆಕ್​ ಪೋಸ್ಟ್​ನಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಹಣ ಪತ್ತೆಯಾಗಿದೆ. ಮೈಸೂರು ಜಿಲ್ಲೆಯ ಕೊಪ್ಪ ಕಡೆಯಿಂದ ಕುಶಾಲನಗರದ ಕಡೆಗೆ ಗೂಡ್ಸ್ ವಾಹನ ಮೂಲಕ ಹಣ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಹಣವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ಚುನಾವಣೆ ವೇಳೆ ಅಕ್ರಮ ನಿಯಂತ್ರಣಕ್ಕಾಗಿ ಸುವಿಧಾ, ಸಿ - ವಿಸಿಲ್ ತಂತ್ರಾಂಶ ಬಳಕೆ

Last Updated : Apr 5, 2023, 10:10 PM IST

ABOUT THE AUTHOR

...view details