ಅಥಣಿ(ಬೆಳಗಾವಿ): ಅರಳಿಕಟ್ಟಿ ಗ್ರಾಮದ ಕಲಬೆರಕೆ ಹಾಲಿನ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ ಕಲಬೆರಕೆಗೆ ಬಳಸುವ ಅಪಾರ ಪ್ರಮಾಣದ ಮಿಶ್ರಣ ಪದಾರ್ಥಗಳನ್ನು ವಶಕ್ಕೆ ಪಡೆದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಮಾಣಿಕ್ ಸಂತ್ರಾಮ ಜಾಧವ್ ಬಂಧಿತ ಆರೋಪಿ. ಪೊಲೀಸರು ಕಾರ್ಯಾಚರಣೆ ವೇಳೆ ಸುಮಾರು 29,260 ರೂಪಾಯಿ ಮೌಲ್ಯದ ಕಲಬೆರಕೆ ಮಾಡುವ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಎಸ್ಪಿ ಹಾಗೂ ಅಥಣಿ ಡಿವೈಎಸ್ಪಿ ಎಸ್.ವಿ.ಗಿರೀಶ್ ಮಾರ್ಗದರ್ಶನದಂತೆ ಡಿಸಿಪಿಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಅವರನ್ನೊಳಗೊಂಡ ತಂಡ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದೆ.