ಬೆಳಗಾವಿ:ಜಿಂಕೆ ಸೇರಿದಂತೆ ವಿವಿಧ ವನ್ಯಜೀವಿಗಳ ಬೇಟೆಯಾಡುತ್ತಿದ್ದ ಬೇಟೆಗಾರನ ಮನೆ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ಮಾಡಿದ್ದಾರೆ.
ಬೇಟೆಗಾರನ ಮನೆ ಮೇಲೆ ಪೊಲೀಸರ ದಾಳಿ ಬೆಳಗಾವಿಯ ನೆಹರು ನಗರದಲ್ಲಿರುವ ವನ್ಯಜೀವಿ ಬೇಟೆಗಾರ ಮೆಹಮೂದ್ ಅಲಿಖಾನ್ (50) ಎಂಬಾತನ ಮನೆ ಮೇಲೆ ದಾಳಿ ನಡೆಸಲಾಗಿದೆ. ರೈಫಲ್, ಜೀವಂತ ಗುಂಡುಗಳು ಸೇರಿದಂತೆ ವನ್ಯಜೀವಿ ಹತ್ಯೆಗೆ ಬಳಸುತ್ತಿದ್ದ ಅಪಾರ ಪ್ರಮಾಣದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ವನ್ಯಜೀವಿ ಹಂತಕನ ಮನೆ ಮೇಲೆ ಪೊಲೀಸರ ದಾಳಿ ಡಿ. 27ರಂದು ಕಿತ್ತೂರು ಅರಣ್ಯ ವಲಯದ ಕುಲವಳ್ಳಿ ಅರಣ್ಯದಲ್ಲಿ ಜಿಂಕೆ ಬೇಟೆಯಾಡುತ್ತಿದ್ದ ನಾಲ್ವರು ಹಂತಕರ ಪೈಕಿ ಇಬ್ಬರು ತಪ್ಪಿಸಿಕೊಂಡಿದ್ದರು. ತಪ್ಪಿಸಿಕೊಂಡ ಇಬ್ಬರ ಪೈಕಿ ಮೆಹಮೂದ್ ಮನೆ ಮೇಲೆ ಇಂದು ನಾಗರಗಾಳಿ ಎಸಿಎಫ್ಸಿ ಜಿ.ಮಿರ್ಜಿ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಓದಿ:ಯುವತಿಯರನ್ನು ಚುಡಾಯಿಸುತ್ತಿದ್ದ ರೋಡ್ ರೋಮಿಯೋಗೆ ಬಿತ್ತು ಗೂಸಾ..ವಿಡಿಯೋ ವೈರಲ್
ಚಿಗರೆ ಕೊಂಬು, ಪಾಯಿಂಟ್ 315 ರೈಫಲ್, ಒಂದು (ಟೆಲಿಸ್ಕೋಪ್) ದೂರದರ್ಶಕ, ಎರಡು ಚಾಕುಗಳು, 2 ಟಾರ್ಚ್, ವಾಹನಕ್ಕೆ ಅಳವಡಿಸುವ ದೊಡ್ಡ ಟಾರ್ಚ್ಗಳು, 2 ವಾಕಿ ಟಾಕಿ, 26 ಜೀವಂತ ಬುಲೆಟ್ಗಳು, ಡಿಬಿಎಲ್ ಸೇರಿದಂತೆ ಬೇಟೆಗೆ ಬೇಕಾದ ಸಾಮಗ್ರಿಗಳು ಈತನ ಮನೆಯಲ್ಲಿ ಸಿಕ್ಕಿವೆ. ತಲೆಮರೆಸಿಕೊಂಡಿರುವ ಆರೋಪಿಯ ಸುಳಿವು ಇನ್ನೂ ಸಿಕ್ಕಿಲ್ಲ.
ವನ್ಯಜೀವಿ ಹಂತಕನ ಮನೆ ಮೇಲೆ ಪೊಲೀಸರ ದಾಳಿ ಪ್ರೊಬೇಷನರಿ ಎಸಿಎಫ್ ಚಂದ್ರಶೇಖರ ಪಾಟೀಲ, ಗೋಲಿಹಳ್ಳಿ ಆರ್.ಎಫ್.ಓ ಶ್ರೀಕಾಂತ್ ಕಡೋಲಕರ, ಬೆಳಗಾವಿ ಆರ್.ಎಫ್.ಓ ಶಿವಾನಂದ ಮಗದುಮ್ಮ, ಡಿಎಫ್ಓಗಳಾದ ಸಂಜಯ ಮಗದುಮ್ಮ, ಮಾಧುರಿ ದಳವಾಯಿ, ವಿನಯ ಗೌಡರ ದಾಳಿಯಲ್ಲಿ ಭಾಗಿಯಾಗಿದ್ದರು. ಈ ದಾಳಿಗೆ ಎಪಿಎಂಸಿ ಠಾಣೆ ಪೊಲೀಸರು ಭದ್ರತೆ ಒದಗಿಸಿದ್ದರು.