ಕರ್ನಾಟಕ

karnataka

ETV Bharat / state

ನೀರಾಮೆ ಮಾರಾಟಗಾರನನ್ನು ಬಂಧಿಸಿದ ಪೊಲೀಸರು - ನೀರಾಮೆ ಮಾರಾಟಗಾರನನ್ನು ಬಂಧಿಸಿದ ಪೋಲಿಸರು

ನೀರಾಮೆಯನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.

turtle
ನೀರಾಮೆ

By

Published : Nov 10, 2020, 7:29 PM IST

ಚಿಕ್ಕೋಡಿ:ತನ್ನ ಸ್ವಂತ ಲಾಭಕ್ಕಾಗಿ ನೀರಾಮೆಯನ್ನು ಹಿಡಿದು ಮನೆಯ ಸಿಂಟೆಕ್ಸ್​​​​​​ನಲ್ಲಿಟ್ಟಿದ್ದ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಆರೋಪಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕರಜಗಾ ಗ್ರಾಮದ ನಿವಾಸಿ ಬಾಳಕೃಷ್ಣ ಭೋವಿ (35) ಬಂಧಿತ. ಈತ ಮಹಾರಾಷ್ಟ್ರಕ್ಕೆ ಮಾರಾಟ ಮಾಡುವ ಉದ್ದೇಶದಿಂದ ನೀರಾಮೆಯನ್ನು ಬಚ್ಟಿಟ್ಟಿದ್ದ.

ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ಮಾಡಿದಾಗ ಆರೋಪಿ ಬಾಳಕೃಷ್ಣ ಓಡಿ ಹೋಗಲು ಪ್ರಯತ್ನಿಸಿದಾಗ ಆತನನ್ನು ಬಂಧಿಸಿದ್ದಾರೆ. 2 ಕೆ.ಜಿ 200 ಗ್ರಾಂನ ನೀರಾಮೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡರು.

ABOUT THE AUTHOR

...view details