ಬೆಳಗಾವಿ:ಕೆಲಸ ಕೊಟ್ಟು ಅನ್ನ ಹಾಕುತ್ತಿದ್ದ ಹೋಟೆಲ್ಗೆ ಕನ್ನ ಹಾಕಿ ಸುಮಾರು 12 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಬೈಲಹೊಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಉಂಡ ಮನೆಗೆ ಕನ್ನ ಹಾಕಿದ್ದ ಖದೀಮ ಅಂದರ್ - undefined
ಕೆಲಸ ಮಾಡುತ್ತಿದ್ದ ಹೋಟೆಲ್ನಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬೈಲಹೊಂಗಲ ಠಾಣೆಯ ಪೊಲೀಸರು ಬಂಧಿಸಿದ್ದು, ಸುಮಾರು 12 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.
ಸಂಜೀವ ಬೋಳೆತ್ತಿ (20) ಬಂಧಿತ ಆರೋಪಿ. ಈತ ಹಿರೇಕೊಪ್ಪ ಗ್ರಾಮದ ನಿವಾಸಿಯಾಗಿದ್ದಾನೆ. ಬೈಲಹೊಂಗಲ ಪಟ್ಟಣದ ಸಂತೋಷ್ ಕೋಠಾರಿ ಎಂಬುವವರ ಮಾಲೀಕತ್ವದ ದೀಪಾ ಹೋಟೆಲ್ನಲ್ಲಿ ಎರಡು ವರ್ಷಗಳ ಹಿಂದೆ ಭಾರಿ ಪ್ರಮಾಣದ ಕಳ್ಳತನ ನಡೆದಿತ್ತು. ಸಂಜೀವ ಕೂಡ ಅದೇ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ.
ಒಮ್ಮೆ ಹೋಟೆಲ್ ಮಾಲೀಕ ಸಂತೋಷ 461 ಗ್ರಾಂ ತೂಕದ ಚಿನ್ನದ ಆಭರಣವನ್ನು ಕೌಂಟರ್ನಲ್ಲಿಟ್ಟಿದ್ದರು. ಕೌಂಟರ್ನಲ್ಲಿ ಚಿನ್ನಾಭರಣ ಇಟ್ಟಿದನ್ನು ನೋಡಿದ್ದ ಸಂಜೀವ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದನು. ಈ ಸಂಬಂಧ ಬೈಲಹೊಂಗಲ ಠಾಣೆಯಲ್ಲಿದೂರು ದಾಖಲಾಗಿತ್ತು. ಇಂದು ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನಿಂದ 11 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.