ಬೆಳಗಾವಿ :ಲಾಕ್‌ಡೌನ್ ಆದೇಶ ಪಾಲಿಸುವಂತೆ ಸೂಚಿಸಿದ ಅಧಿಕಾರಿಗಳಿಗೆ ಮಹಿಳಾ ವ್ಯಾಪಾರಸ್ಥರು ಹಿಡಿಶಾಪ ಹಾಕಿರುವ ಘಟನೆ ಬೆಳಗಾವಿಯ ಆಝಂ ನಗರದಲ್ಲಿ ನಡೆದಿದೆ. ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದೆ.
ಬೀದಿ ಬದಿ ವ್ಯಾಪಾರಕ್ಕೆ ವಿರೋಧ:ಅಧಿಕಾರಿಗಳಿಗೆ ವ್ಯಾಪಾರಸ್ಥರಿಂದ ಹಿಡಿಶಾಪ - ಮಹಿಳಾ ವ್ಯಾಪಾರಸ್ಥರಿಂದ ಅಧಿಕಾರಿಗಳಿಗೆ ಹಿಡಿಶಾಪ
ಇದರಿಂದ ಕೆರಳಿದ ಮಹಿಳಾ ವ್ಯಾಪಾರಸ್ಥರು ಪೊಲೀಸರು, ಪಾಲಿಕೆ ಸಿಬ್ಬಂದಿ ಜೊತೆ ವಾಗ್ವಾದ ಮಾಡಿದ್ದಾರೆ.
![ಬೀದಿ ಬದಿ ವ್ಯಾಪಾರಕ್ಕೆ ವಿರೋಧ:ಅಧಿಕಾರಿಗಳಿಗೆ ವ್ಯಾಪಾರಸ್ಥರಿಂದ ಹಿಡಿಶಾಪ police and road side traders fight](https://etvbharatimages.akamaized.net/etvbharat/prod-images/768-512-6618245-thumbnail-3x2-surya.jpg)
ಅಧಿಕಾರಿಗಳಿಗೆ ವ್ಯಾಪಾರಸ್ಥರಿಂದ ಹಿಡಿಶಾಪ
ಅಧಿಕಾರಿಗಳಿಗೆ ವ್ಯಾಪಾರಸ್ಥರಿಂದ ಹಿಡಿಶಾಪ
ಬೀದಿ ಬದಿ ತರಕಾರಿ ವ್ಯಾಪಾರ ಮಾರಾಟ ಮಾಡದಂತೆ ಬೆಳಗಾವಿ ಮಹಾನಗರ ಪಾಲಿಕೆ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಆದರೂ ರಸ್ತೆ ಬದಿ ಗುಂಪು ಗುಂಪಾಗಿ ಮಹಿಳಾ ವ್ಯಾಪಾರಸ್ಥರು ತರಕಾರಿ ಮಾರಾಟ ಮಾಡಿದ್ದಾರೆ. ಇದನ್ನು ಮಹಾನಗರ ಪಾಲಿಕೆ ಮತ್ತು ಪೊಲೀಸ್ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೆರಳಿದ ಮಹಿಳಾ ವ್ಯಾಪಾರಸ್ಥರು ಪೊಲೀಸರು, ಪಾಲಿಕೆ ಸಿಬ್ಬಂದಿ ಜೊತೆ ವಾಗ್ವಾದ ಮಾಡಿದ್ದಾರೆ. ಆಕ್ರೋಶಗೊಂಡ ಕೆಲ ಮಹಿಳಾ ವ್ಯಾಪಾರಿಗಳು ರಸ್ತೆ ಮೇಲೆ ಕುಳಿತು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.