ಕರ್ನಾಟಕ

karnataka

ETV Bharat / state

ಉಪಚುನಾವಣೆ ಹಿನ್ನೆಲೆ ಅಥಣಿಯಲ್ಲಿ ಸರ್ಕಾರಿ ಜಾಹೀರಾತು, ಫಲಕಗಳ ತೆರವು

ಉಪಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಅಥಣಿಯಲ್ಲಿ ತಾಲೂಕು ಆಡಳಿತ ರಾಜಕೀಯ ಜಾಹೀರಾತುಗಳ ತೆರವಿಗೆ ಮುಂದಾಗಿದೆ.

By

Published : Nov 12, 2019, 7:11 PM IST

ಫಲಕಗಳ ತೆರವು

ಅಥಣಿ:ವಿಧಾನಸಭಾ ಉಪಚುನಾವಣೆ ಹಿನ್ನೆಲೆ, ಸರ್ಕಾರಿ ಜಾಹೀರಾತು, ಸಾಧನೆ ಫಲಕಗಳನ್ನು ಅಥಣಿಯಲ್ಲಿ ತೆರವುಗೊಳಿಸಲಾಯಿತು.

ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಸರ್ಕಾರಿ ಜಾಹೀರಾತು, ಸಾಧನೆ ಫಲಕ, ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ಬಿಂಬಿಸುವ ರಾಜಕಾರಿಣಿಗಳ ಹೆಸರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಫಲಕ ಬಿತ್ತರಿಸುವ ಎಲ್ಲಾ ಚಿತ್ರಗಳನ್ನು ತೆರವು ಮಾಡಲಾಯಿತು.

ಉಪಚುನಾವಣೆ ಹಿನ್ನೆಲೆ ಜಾಹೀರಾತು, ಫಲಕಗಳ ತೆರವು

ತಾಲೂಕಿನ 69ಹಳ್ಳಿಗಳಲ್ಲಿ ಹಾಗೂ ಅಥಣಿ ಪಟ್ಟಣದಲ್ಲಿ ಬಸ್ ಮೇಲೆ ಸರ್ಕಾರದ ಸಾಧನೆ ಜಾಹೀರಾತುಗಳು ರಾರಾಜಿಸುತ್ತಿದ್ದು, ಅವುಗಳನ್ನು ಸಹ ಸಾಧ್ಯವಾದಷ್ಟು ತೆರವು ಮಾಡಲು ತಾಲೂಕು ಆಡಳಿತ ಮುಂದಾಗಿದೆ.

ABOUT THE AUTHOR

...view details